Home » ಮಂಗಳೂರು : ವೀಳ್ಯದೆಲೆ ಮೂಲಕ ಭವಿಷ್ಯ ನಿಖರವಾಗಿ ಹೇಳಿದವರಿಗೆ 1 ಲಕ್ಷ ರೂ. ಬಹುಮಾನ – ನರೇಂದ್ರ ನಾಯಕ್ ಸವಾಲ್

ಮಂಗಳೂರು : ವೀಳ್ಯದೆಲೆ ಮೂಲಕ ಭವಿಷ್ಯ ನಿಖರವಾಗಿ ಹೇಳಿದವರಿಗೆ 1 ಲಕ್ಷ ರೂ. ಬಹುಮಾನ – ನರೇಂದ್ರ ನಾಯಕ್ ಸವಾಲ್

0 comments

ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು, ತಾಂಬೂಲ ಪ್ರಶ್ನೆ ಚಿಂತನೆ ಮೂಲಕ ಭವಿಷ್ಯವನ್ನು ಹೇಳುವ ಚಿಂತಕರಿಗೆ ಸವಾಲು ಎಸೆದಿದ್ದು ನಿಖರವಾಗಿ ಉತ್ತರಿಸುವವರಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ನರೇಂದ್ರ ನಾಯಕ್ ಅವರು ಈ ಸವಾಲನ್ನು ಹಾಕಿದ್ದು, 6 ಮುಚ್ಚಿರುವ ಪ್ರತ್ಯೇಕ ಲಕೋಟೆಗಳಲ್ಲಿ ಇರುವುದೇನು ಎಂಬುದನ್ನು ನಿಖರವಾಗಿ ಹೇಳುವವರಿಗೆ ಈ ಬಹುಮಾನ ಸಿಗಲಿದೆ ಎಂದಿದ್ದಾರೆ.

ಆಸಕ್ತರು ತಮ್ಮ ಉತ್ತರಗಳನ್ನು narenyen@gmail.com ಅಥವಾ ವಾಟ್ಸಾಪ್ ಸಂಖ್ಯೆ 9448216343 ಗೆ ಮೇ 31ರೊಳಗೆ ಕಳುಹಿಸಬಹುದಾಗಿದ್ದು, ಜೂನ್ 1ರಂದು ಮಂಗಳೂರು
ಪ್ರೆಸ್ ಕ್ಲಬ್ ನಲ್ಲಿ ಆರು ಲಕೋಟೆಗಳನ್ನು ತೆರೆಯಲಾಗುತ್ತದೆ.

ಇಮೇಲ್ ಅಥವಾ ವಾಟ್ಸಾಪ್ ಗೆ ಬಂದಿರುವ ಉತ್ತರಗಳನ್ನು ಇದಕ್ಕೆ ತಾಳೆ ಮಾಡಿ ನಿಖರ ಉತ್ತರ ನೀಡಿದವರಿಗೆ ತೆರಿಗೆ ಕಡಿತಗೊಳಿಸಿ ಒಂದು ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಈ ಸವಾಲು ಧಾರ್ಮಿಕ ನಂಬಿಕೆಗಳು, ಜಾತಿ, ಪಂಥ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ. ಮೇ 31ರ ಮಧ್ಯರಾತ್ರಿವರೆಗೆ ಕಳುಹಿಸಲಾಗುವ ಎಲ್ಲ ಉತ್ತರಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚಿನ ಮಂದಿ ಉತ್ತರ ನೀಡಿದರೂ ಪ್ರತಿಯೊಬ್ಬರಿಗೂ ತಲಾ 1 ಲಕ್ಷ ಬಹುಮಾನ ದೊರೆಯಲಿದೆ ಎಂದಿದ್ದಾರೆ.

You may also like

Leave a Comment