Betel leaf price :ಯಾವ ಉತ್ಪನ್ನದ ಮೇಲೆ ಯಾವ ರೀತಿ ಬೆಲೆ ಏರಿಕೆ ಆಗುತ್ತೆ ಅನ್ನೋದನ್ನು ಊಹಿಸಲು ಸಹ ಸಾಧ್ಯವಿಲ್ಲ(impossible ). ಇದೀಗ ದಿನನಿತ್ಯ ಎಲೆ ಅಡಕೆ ಜಗಿಯುವವರ ಅದೋಗತಿ ಆಗಿಬಿಟ್ಟಿದೆ. ಹೌದು ಕೆಲವರಿಗೆ ಕೂತಲ್ಲಿ ನಿಂತಲ್ಲಿ ಎಲೆ ಅಡಿಕೆ ಜಗಿಯುವ ಅಭ್ಯಾಸವಿರುತ್ತೆ. ಅಂತವರು ಎಲೆಯ ಬೆಲೆ ಕೇಳಿ ಸುಸ್ತಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವೀಳ್ಯದೆಲೆ ಕೃಷಿ (agriculture )ಮಾಡುತ್ತಾರೆ. ಇನ್ನು ನಗರದಲ್ಲಿ ಅಲ್ಲಲ್ಲಿ ಪಾನ್ ಶಾಪ್(shop) ಗಳಲ್ಲಿ ಮಾರಾಟ ಮಾಡುವ ವೀಳ್ಯದೆಲೆ ಬೆಲೆ (Betel leaf price) ದಿನೇ ದಿನೇ ಬೆಲೆ ಹೆಚ್ಚುತ್ತಿದೆ. ಮಳೆಗಾಲ ಕೊನೆಗೊಂಡು ಚಳಿಗಾಲಕ್ಕೆ ಆರಂಭವಾಗುವ ಹೊತ್ತಿಗೆ ವೀಳ್ಯದೆಲೆಯ ಬಳ್ಳಿ ಹೊಸ ಚಿಗುರು ಬರುವುದಿಲ್ಲ. ಇದರಿಂದ ಈ ಸಮಯಕ್ಕೆ ವೀಳ್ಯದೆಲೆ ಬೆಲೆ ಏರಿಕೆ ಆಗುತ್ತಿದೆ.
ಎಲೆ ಮಾರಾಟಗಾರರು ಹಿಂದೆಲ್ಲಾ ದರ ಕಡಿಮೆ ಇದ್ದಾಗ ಐದು, ಹತ್ತು ರೂಪಾಯಿಗೆ ಎಣಿಸದೆ ಕೈಗೆ ಸಿಕ್ಕಷ್ಟು ಎಲೆ ಕೊಡುತ್ತಿದ್ದರು. ಆದರೆ ಈಗ ಐದು ರೂಪಾಯಿಗೆ 5, ಬಿಳಿ ಎಲೆ ಆದರೆ ಮೂರರಿಂದ ನಾಲ್ಕು ಎಲೆಯಷ್ಟೇ ಕೊಡುತ್ತಿದ್ದಾರೆ. ಹೌದು ಒಂದು ಕಟ್ಟು ನೂರ ಐವತ್ತು ಗಡಿ ದಾಟಿದ್ದು, ಪುಡಿ ಹಾಗೂ ಕಪ್ಪು ಬಣ್ಣದ ಎಲೆ ಒಂದು ಕಟ್ಟಿಗೆ ಕನಿಷ್ಠ 80 ರೂಪಾಯಿ ಇದ್ದರೆ ಬಿಳಿ ಬಣ್ಣದ ಚಿಗುರು ಎಲೆಯ ಒಂದು ಕಟ್ಟು 160 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಈಗಾಗಲೇ ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆಯಾಗಿದ್ದು, ವೀಳ್ಯದೆಲೆ ತೋಟಗಳಲ್ಲಿ ನೀರು ನಿಂತು ಸಾಕಷ್ಟು ಬಳ್ಳಿಗಳು ಕೊಳೆತು ಹೋಗಿವೆ. ಇನ್ನು ಈ ಸಮಯದಲ್ಲಿ ಹೆಚ್ಚಾಗಿ ಶುಭ ಕಾರ್ಯಕ್ರಮಗಳು ನಡೆಯುವುದರಿಂದ ವೀಳ್ಯದೆಲೆಯ ದರ ಹೆಚ್ಚಾಗಿದೆ ಎಂದು ಮಾರಾಟಗಾರರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮಾರಾಟಗಾರರ ಪ್ರಕಾರ ನವೆಂಬರ್ ತಿಂಗಳಿನಿಂದ ಕಟ್ಟಿಗೆ 50, 60, 70 ರೂ.ಗಳ ಆಸುಪಾಸಿನಲ್ಲಿದ್ದ ದರ ಜನವರಿ ತಿಂಗಳಿನಿಂದ ಈಚೆಗೆ ನಿತ್ಯವೂ ಏರುತ್ತಲೆ ಇದೆ. ಕೆಲವೊಮ್ಮೆ ನೂರು ರೂಪಾಯಿ ಕೊಟ್ಟರು ಎಲೆ ಸಿಗುತ್ತಿಲ್ಲ. ಎಲೆ ಮಾರಾಟ ಮಾಡುವುದು ಕಷ್ಟವಾಗುತ್ತಿದೆ. ಪೂರ್ವ ಮುಂಗಾರು ಆರಂಭವಾಗಿ ಅಂಬುಗಳನ್ನು ಇಳಿಸಿ ಕಟ್ಟಿದ ಮೇಲೆ, ಹೊಸ ಚಿಗುರು ಬಂದ ನಂತರವೇ ವೀಳ್ಯದೆಲೆ ದರ ಇಳಿಯುತ್ತದೆ. ಅಲ್ಲಿಯವರೆಗೆ ಹೀಗೆ ಮುಂದುವರಿಯುತ್ತದೆ ಎನ್ನುತ್ತಾರೆ .
ಅದಲ್ಲದೆ ಸುಮಾರು 30 ವರ್ಷಗಳಿಂದ ಇಷ್ಟೊಂದು ದರ ಯಾವತ್ತು ಆಗಿರಲಿಲ್ಲ.
ಇನ್ನು ವೀಳ್ಯದೆಲೆ ಬೆಳೆಗಾರರ ಸಂಖ್ಯೆ ಕಡಿಮೆಯಾಗಿರುವುದರಿಂದ ಮತ್ತು ವಾತಾವರಣದ ಬದಲಾವಣೆ ಹಿನ್ನೆಲೆ ವೀಳ್ಯದೆಲೆ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
