Home » Farmers: ರೈತರಿಗೆ ಉಪಯೋಗ ಈ ChatGPT; ಜನಸ್ನೇಹಿ ಆಪ್ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ವಿವರ!

Farmers: ರೈತರಿಗೆ ಉಪಯೋಗ ಈ ChatGPT; ಜನಸ್ನೇಹಿ ಆಪ್ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ವಿವರ!

0 comments

Farmers: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಚಾಟ್‌ಜಿಪಿಟಿ (ChatGPT)ಡೇಟಾ ಜೊತೆಗೆ ಸಂಯೋಜಿಸಲು ವಾಟ್ಸಾಪ್(WhatsApp) ಚಾಟ್‌ಬಾಕ್ಸ್ ಅನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ. ಇದು ರೈತರಿಗೆ ಸಹಕಾರಿಯಾಗಲಿದ್ದು, ರೈತರಿಗೆ ಸರ್ಕಾರದ ಪ್ರಮುಖ ಯೋಜನೆಗಳನ್ನು ಸುಲಭವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ. ರೈತರ(Farmers) ಗೊಂದಲಗಳನ್ನು ಪರಿಹರಿಸುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಭಾಷಿಣಿ (bhashini) ಎಂಬ ಫಲಕವನ್ನು ಸ್ಥಾಪಿಸಿದ್ದು, ಇದರಿಂದ ರೈತರು ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ ಧ್ವನಿ ರೂಪದಲ್ಲಿ (Voice Note) ಮಾಹಿತಿ ಪಡೆಯಬಹುದು. ರೈತರು ಕೃಷಿ ಸಂಬಂಧಿತ ಪ್ರಶ್ನೆಗಳನ್ನು ಧ್ವನಿ ಮೂಲಕ ಕೇಳಬಹುದು. ಇದಕ್ಕೆ ಬಾಶಿನಿ ತಂಡ ವಾಟ್ಸಾಪ್ ಮೂಲಕ ಉತ್ತರ ನೀಡುತ್ತದೆ. ಹಾಗೆಯೇ, ಕೃತಕ ಬುದ್ಧಿಮತ್ತೆ (Artificial intelligence) ಅಪ್ಲಿಕೇಶನ್‌ಗಳಿಂದ ಡೇಟಾವನ್ನು ಸಂಯೋಜಿಸಲು ಇದೀಗ ಕ್ರಮ ಕೈಗೊಳ್ಳಲಾಗುತ್ತಿದೆ.

ಕಳೆದ ನವೆಂಬರ್‌ನಲ್ಲಿ AI ಚಾಟ್‌ಜಿಪಿಟಿ ಅಪ್ಲಿಕೇಶನ್ ಪ್ರಾರಂಭಿಸಲಾಗಿತ್ತು. ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ನೀಡುವ ಈ ಆಪ್ ಅನ್ನು ಮೈಕ್ರೋಸಾಫ್ಟ್ ನ ಬಿಂಗ್(Microsoft Bing) ಮತ್ತು ಎಡ್ಜ್ ಬ್ರೌಸರ್ ಗಳಿಗೆ (edge browser) ಅಳವಡಿಸಲಾಗಿದೆ. ಕೇಂದ್ರ ಸರ್ಕಾರ ತಮ್ಮ ಚಾಟ್ ಬಾಕ್ಸ್ ಗಳಲ್ಲಿ ಚಾಟ್ ಜಿಪಿಟಿ ಡೇಟಾ ಅಳವಡಿಸಿಕೊಳ್ಳುವ ಕಾರ್ಯವನ್ನು ನಡೆಸುತ್ತಿದ್ದು, ಇದರಿಂದ ರೈತರ ಎಲ್ಲಾ ಸಮಸ್ಯೆ, ಪ್ರಶ್ನೆ, ಅನುಮಾನಗಳಿಗೆ ಸ್ಪಷ್ಟ ಉತ್ತರ,ಪರಿಹಾರ ಸಿಗಲಿದೆ.

ಇದೀಗ ಈ ಚಾಟ್‌ಬಾಟ್ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮರಾಠಿ, ಬೆಂಗಾಲಿ, ಕನ್ನಡ, ಒಡಿಯಾ, ಅಸ್ಸಾಮಿ ಸೇರಿದಂತೆ 12 ಭಾಷೆಗಳಲ್ಲಿ ಲಭ್ಯವಿದೆ. ರೈತರು ಯಾವ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೋ ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಲು ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

You may also like

Leave a Comment