Home » ಐದು ನೂರರತ್ತ ಮುಖ ಮಾಡಿದ ಹೊಸ ಅಡಿಕೆ ಧಾರಣೆ

ಐದು ನೂರರತ್ತ ಮುಖ ಮಾಡಿದ ಹೊಸ ಅಡಿಕೆ ಧಾರಣೆ

by Praveen Chennavara
0 comments

ಸವಣೂರು : ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ.ಸದ್ಯದ ಟ್ರೆಂಡ್ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ಕೆ.ಜಿ.ಗೆ ಐದು ನೂರರತ್ತ ಮುಖಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಪ್ರತೀ ಸೋಮವಾರ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ ಕಾಣುತ್ತಿದೆ. ಸೋಮವಾರ ಹೊರ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ ಕೆ.ಜಿ.ಗೆ 485ಕ್ಕೆ ಖರೀದಿಯಾಗಿದೆ.ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 480ಕ್ಕೆ ಇತ್ತು.

ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. 35ರಷ್ಟು ಏರಿಕೆಯಾಗಿದೆ. ಮುಂದಿನ ವಾರ ಚಾಲಿ ಹೊಸ ಅಡಿಕೆಯ ಧಾರಣೆ ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆ ವ್ಯಾಪಾರಸ್ಥರಲ್ಲಿ ಹಾಗೂ ಬೆಳೆಗಾರರಲ್ಲಿ ಮೂಡಿದೆ.

ಕಳೆದ 3 ವಾರಗಳಿಂದ ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505 ಮತ್ತು ರೂ. 500ರಲ್ಲಿಯೇ ಮುಂದುವರಿದಿದೆ.

ಕ್ಯಾಂಪ್ಕೋದಲ್ಲಿ ಮಂಗಳವಾರ ಹೊಸ ಅಡಿಕೆಗೆ 410 – 480, ಹಳೆ ಅಡಿಕೆಗೆ 480 – 505,ಡಬಲ್ ಚೋಲ್ ‌ಗೆ 480 – 505, ಫಟೋರಗೆ 280 ರಿಂದ 390,ಉಳ್ಳಿಗಡ್ಡೆಗೆ – 150 ರಿಂದ 305,ಕರಿಗೋಟಿಗೆ – 220 ರಿಂದ 315 ರವರೆಗೆ ಇದೆ.

You may also like

Leave a Comment