Home » ಕೆದಿಲ : ಮನೆಯಂಗಳದಿಂದ ಅಡಿಕೆ ಕಳವು | 4 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಕೆದಿಲ : ಮನೆಯಂಗಳದಿಂದ ಅಡಿಕೆ ಕಳವು | 4 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

by Praveen Chennavara
0 comments

ಪುತ್ತೂರು: ಕೆದಿಲದಲ್ಲಿ ಮನೆಯಂಗಳದಿಂದಲೇ ಅಡಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆದಿಲ ಬಡೆಕ್ಕಿಲ ನಿವಾಸಿ ಗಣೇಶ್ ಬಂಧಿತ ಆರೋಪಿ. ಕೆದಿಲ ಅಬ್ದುಲ್ಲಾ ಎಂಬವರ ಮನೆಯಂಗಳ ಮತ್ತು ತೋಟದಿಂದ ಅಡಿಕೆ ಕಳವಾದ ಕುರಿತು ಅ.3ರಂದು ಬೆಳಕಿಗೆ ಬಂದಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು.

ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಅಡಿಕೆ ಕಳ್ಳ ಅಡಿಕೆಯನ್ನು ಕಬಕದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂದಿತ ಆರೋಪಿಯನ್ನು ಅ.4ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

You may also like

Leave a Comment