Kisan Pehchaan patra: ರೈತರಿಗೆ (farmer) ವಿಶೇಷ ಗುರುತಿನ ಚೀಟಿ ಕೊಡುವ ಕೇಂದ್ರ ಸರ್ಕಾರದ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ (Kisan Pehchaan Patra) ಕೂಡಾ ಒಂದು. ವರದಿಗಳ ಪ್ರಕಾರ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಈ ಐಡಿಯನ್ನು ನೀಡಲಾಗಿದೆ. ಈಗ ಪಂಜಾಬ್, ಹಿಮಾಚಲ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲೂ ಅಭಿಯಾನ ನಡೆಯುತ್ತಿದೆ. ಈ ಹಣಕಾಸು ವರ್ಷದೊಳಗೆ 9 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.ದೇಶಾದ್ಯಂತ ಅಂದಾಜು ಪ್ರಕಾರ 14 ಕೋಟಿ ರೈತರಿದ್ದಾರೆ. ಇವರ ಪೈಕಿ ಶೇ. 30-40ರಷ್ಟು ಮಂದಿಗೆ ಸ್ವಂತ ಜಮೀನು ಇಲ್ಲ. ಇವರು ಗುತ್ತಿಗೆ ಪಡೆದು ಕೃಷಿಗಾರಿಕೆ ಮಾಡುತ್ತಿದ್ದಾರೆ. ಸ್ವಂತ ಜಮೀನು ಹೊಂದಿರುವ ರೈತರಿಗೆ ಪೆಹಚಾನ್ ಕಾರ್ಡ್ ಕೊಡಲಾಗುತ್ತದೆ.ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 11.2 ಕೋಟಿ ಮಂದಿ ನೊಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಕೂಡ ಕಿಸಾನ್ ಪೆಹಚಾನ್ ಕಾರ್ಡ್ಗಳನ್ನು ಪಡೆಯಲು ಅರ್ಹರಾಗಿರಬಹುದು. 2026-27ರ ವರ್ಷದೊಳಗೆ 11 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿ ಇಡಲಾಗಿದೆ.ಕಿಸಾನ್ ಪೆಹಚಾನ್ ಕಾರ್ಡ್ ಮೂಲಕ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ರೈತರ ಡಿಜಿಟಲ್ ರಿಜಿಸ್ಟ್ರಿಯನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ಈ ಹೆಜ್ಜೆ ಇಡಲಾಗುತ್ತಿದೆ. ಈ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ರೈತರಿಗೆ ಹಲವ ಯೋಜನೆಗಳನ್ನು ವಿತರಿಸಲು ಅನುಕೂಲವಾಗುತ್ತದೆ. ಹೀಗಾಗಿ, ರೈತರನ್ನು ಗುರುತಿಸಿ ಕಿಸಾನ್ ಪೆಹಚಾನ್ ಕಾರ್ಡ್ಗಳನ್ನು ವಿತರಿಸುವುದು ಬಹಳ ಮುಖ್ಯ ಹೆಜ್ಜೆ ಎನ್ನಲಾಗಿದೆ. ಪಿಎಂ ಕಿಸಾನ್ ಸೇರಿದಂತೆ ರೈತರಿಗೆ ಸರ್ಕಾರ ರೂಪಿಸುವ ವಿವಿಧ ಯೋಜನೆಗಳಿಗೆ ಈ ಕಾರ್ಡ್ ಮುಖ್ಯ ದಾಖಲೆಯಾಗಿ ಅಥವಾ ಆಧಾರವಾಗಿ ಇರುತ್ತದೆ.
Kisan Pehchaan patra:ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ ವಿತರಣೆ
8
