Home » PM kisan Yojana : ಇಂದು ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್‌!

PM kisan Yojana : ಇಂದು ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್‌!

by Mallika
0 comments
PM kisan yojan

PM Kisan yojana : ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ರೈತರಿಗೆ ಇದೊಂದು ಖುಷಿಯ ಸುದ್ದಿಯಾಗಿದೆ. ಪಿಎಂ ನರೇಂದ್ರ ಮೋದಿ ಅವರು ಇಂದು ಪಿಎಂ ಕಿಸಾನ್‌(PM Kisan yojana ) ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಲಿದ್ದಾರೆ. ಈ ಬಗ್ಗೆ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಟ್ವೀಟ್‌ ಮಾಡಿದ್ದಾರೆ. ಇಂದು ಪಿಎಂ ಕಿಸಾನ್‌ ರೈತರ ಖಾತೆಗಳಿಗೆ 16,800 ಕೋಟಿ ರೂಪಾಯಿಗಳ ಜಮೆ ಆಗಲಿದೆ.

ಈ ಯೋಜನೆಯಡಿ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2000 ಗಳನ್ನು ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಇದನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಇಂದು ಬೆಳಗಾವಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್‌ ಯೋಜನೆಯ ಹದಿಮೂರನೇ ಕಂತಿನ ಹಣವನ್ನು ಬಿಡುಗಡೆ ಗೊಳಿಸಲಿದ್ದಾರೆ ಎಂದು ವರದಿ ಹೇಳಿದೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.

11ನೇ ಕಂತನ್ನು ಪಿಎಂ ಕಿಸಾನ್‌ ಯೋಜನೆಯದ್ದು 2022, ಮೇ ರಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ಅಕ್ಟೋಬರ್‌, 2022 ರಂದು ಹನ್ನೆರಡನೇ ಕಂತು ಬಿಡುಗಡೆ ಮಾಡಲಾಗಿತ್ತು.

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಹೇಗೆ ಪರಿಶೀಲಿಸಬಹುದು?
ಮೊದಲು ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಬೇಕು.
ಮುಖಪುಟದಲ್ಲಿ ಡ್ಯಾಶ್ ಬೋರ್ಡ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
ಈಗ ಪಟ್ಟಿಯು ಪರದೆಯ ಮೇಲೆ ತೆರೆಯುತ್ತದೆ.
ಇದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

You may also like

Leave a Comment