Dharmastala temple: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ(Dharmastala) ವೀರೇಂದ್ರ ಹೆಗ್ಗಡೆಯವರ ಕುಟುಂಬದ ಕೆಲವರ ಹೆಸರು ತಳುಕು ಹಾಕಿಕೊಂಡಬಳಿಕ ಅವರ ವಿರುದ್ಧ ಅನೇಕರು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಈ ಆರೋಪ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಇನ್ನು ತಿಳಿಯಬೇಕಷ್ಟೆ. ಅಂತೆಯೇ ಇತ್ತೀಚೆಗೆ ಸೌಜನ್ಯ ಪರ ನಡೆದ ಹೋರಾಟವೊಂದರಲ್ಲಿ ಹೆಗ್ಗಡೆಯವರ ವಿರುದ್ಧ ಒಬ್ಬರು ಆಕ್ರೋಶ ಭರಿತರಾಗಿ ಮಹೇಶ್ ಶೆಟ್ಟಿ ತಿಮರೋಡಿ(Mahesh shetty timarodi) ಅವರಲ್ಲಿ ದೂರೊಂದನ್ನು ನೀಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಹೌದು, ಇತ್ತೀಚೆಗೆ ಸೌಜನ್ಯ ಪರ ನಡೆದ ಹೋರಾಟದ ಸಂದರ್ಭದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಬಳಿ ಬಂದು ಮಾತನಾಡಿದ ವ್ಯಕ್ತಿಯೊಬ್ಬರು ಆವೇಶಭರಿತರಾಗಿ ‘ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದಾಗ ನನ್ನ ಮಗಳಿಗೆ ಒಂದೂವರೆ ಪವನ್ ಚಿನ್ನದ ಸರವನ್ನು ಹಾಕಿದ್ದೆ. ದೇವಾಲಯದ ಒಳಗಡೆ ತುಲಾಬರ ಸೇವೆ ಮಾಡುವ ಸ್ಥಳದಲ್ಲಿ ದೇವರ ದರ್ಶನಕ್ಕೆ ನಿಂತಾಗ ಯಾರೋ ಕಿಡಿಗೇಡಿಗಳು ಆ ಸರವನ್ನು ಕದ್ದುಕೊಂಡು ಹೋದರು’
‘ಆಗ ಏನು ಮಾಡಲು ತೋಚದ ನಾನು ಸೀದಾ ಮಂಜುನಾಥ ಸ್ವಾಮಿ ಬಳಿ ತೆರಳಿದೆ. ಆ ವೇಳೆ ಅಲ್ಲಿದ್ದ ಪೀಠದಲ್ಲಿ ಈಗಿನ ಧರ್ಮಾಧಿಕಾರಿಗಳು ಅದರಲ್ಲಿ ಕುಳಿತಿದ್ದರು. ಇದನ್ನು ಕಂಡ ನಾನು ಸೀದಾ ಅವರ ಬಳಿ ತೆರಳಿ ನನ್ನ ಮಗುವಿನ ಚಿನ್ನವನ್ನು ಕದ್ದುಕೊಂಡು ಹೋದರು ಮರ್ರೆ. ಎಂತ ಪರಿಹಾರ ಇದಕ್ಕೆ ಕೇಳಿದೆ. ಅದಕ್ಕೆ ಆ ಧರ್ಮಾಧಿಕಾರಿಗಳು ನೀವು ಇದೇನು ಹೇಳುವುದು.. ಅಲ್ಲಿ ನೇತ್ರಾವತಿ ಬಳಿ ಇಂದು 8 ಪವನ್ ದು ಮಂಗಲಸೂತ್ರವನ್ನೇ ಕದ್ದಿದ್ದಾರೆ’ ಎಂದರು.
ಇದಕ್ಕೆ ನೀವೇನು ಧರ್ಮಸ್ಥಳದಲ್ಲಿ ಕಳ್ಳರನ್ನೇ ಸಾಕುವುದಾ ಎಂದು ಕೇಳಿದೆ ಆ ವೀರೇಂದ್ರ ಹೆಗ್ಗಡೆಯವರಿಗೆ. ಬರಾಬರಿ ಮಾತನಾಡಿದ್ದೇನೆ. ನನಗೆ ನೀವು ಏನಾದರೂ ಒಂದು ಪರಿಹಾರ ಹೇಳಬಹುದಿತ್ತು. ಆದರೆ ಅಲ್ಲಿ ಮಂಗಲ ಸೂತ್ರ ಕದ್ದೊಯ್ದಿದ್ದಾರೆ ಎಂದು ಹೇಳುತ್ತೀರಲ್ಲಾ.. ಇದಕ್ಕೆ ನೀವು ಇರುವುದಾ? ಎಂದು ಕೇಳಿದೆ ಎನ್ನುತ್ತಾರೆ. ಆಗ ಮಹೇಶ್ ಶೆಟ್ಟಿ ಅವರು ಅದು ನೇತ್ರಾವತಿಯಲ್ಲಿ ಕಳ್ಳತನ ಆಗಿದ್ದು, ಇದು ದೇವಸ್ಥಾನದಲ್ಲಿ ಆದದ್ದು. ಯಾರು ಕಳ್ಳತನ ಮಾಡುತ್ತಾರೆ ಎಂದು ಕೇಳಿದರು.
ಬಳಿಕ ಮಾತನಾಡಿದ ಆ ವ್ಯಕ್ತಿ ಧರ್ಮಸ್ಥಳ ಇರುವುದು ಹೆಣ್ಣು, ಹೊನ್ನು, ಮಣ್ಮಿಗಾಗಿ ಮಾತ್ರ ಇರುವುದು ಎಂದು ಈಗ ಗೊತ್ತಾಗಿದೆ. ಈ ರೀತಿ ಅಲ್ಲಿ ನಾವು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಿಯದ್ದು ಎಂಬ ಮಾಹಿತಿ ಇಲ್ಲ. ಹೆಗ್ಗಡೆಯವರು ಹೀಗೆ ಹೇಳಿದ್ದಾರೆ ಎಂಬುದರ ಸತ್ಯಾಸತ್ಯತೆ ತಿಳಿದಿಲ್ಲ. ಆದರೆ ಕೆಲ ದಿನಗಳಿಂದ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
https://fb.watch/mU_N56YbET/?mibextid=FggW5e
