Home » ಆಲಂಕಾರು:  ದೋಣಿ ನಾವಿಕ  ನೇಮಣ್ಣ ಗೌಡ ಇನ್ನಿಲ್ಲ

ಆಲಂಕಾರು:  ದೋಣಿ ನಾವಿಕ  ನೇಮಣ್ಣ ಗೌಡ ಇನ್ನಿಲ್ಲ

by Praveen Chennavara
0 comments

ಕಡಬ : ತಾಲೂಕಿನ ಆಲಂಕಾರು ಗ್ರಾಮದ ಶರವೂರು ನಿವಾಸಿ ನೇಮಣ್ಣ ಗೌಡ ಜ.18 ರಂದು ನಿಧನರಾಗಿದ್ದಾರೆ.

ನೇಮಣ್ಣ ಗೌಡ ರವರು ಕುದ್ಮಾರು ಗ್ರಾಮದ ಶಾಂತಿಮೊಗರು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕರನ್ನು ಮತ್ತು ಸ್ಥಳೀಯರನ್ನು ಸೇತುವೆ ಇಲ್ಲದ ಸಂದರ್ಭದಲ್ಲಿ ದೋಣಿಯ ಮೂಲಕ ಕುಮಾರದಾರ ನದಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಿದ್ದರು.

ಸಾರ್ವಜನಿಕರ ವಲಯದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

You may also like

Leave a Comment