Home » ಆಲಂಕಾರು: ಮಲಗಿದ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ!! ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಆಲಂಕಾರು: ಮಲಗಿದ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ!! ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

0 comments

ಆಲಂಕಾರು: ವಿಪರೀತ ಮದ್ಯವ್ಯಸನಿಯೊಬ್ಬರು ಇಲ್ಲಿನ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ವರದಿಯಾಗಿದ್ದು, ಮೃತರನ್ನು ಬೆಳ್ತಂಗಡಿ ತಾಲೂಕಿನ ಕಣಿಯೂರಿನ ಶೇಸಪ್ಪ ಗೌಡ ಎಂದು ಗುರುತಿಸಲಾಗಿದೆ.

ಮೃತರ ಮಗಳು ಶ್ರೀಮತಿ ಹೇಮಾವತಿ ಎಂಬವರು ನೀಡಿದ ದೂರನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ತಂದೆ ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದು.ಫೆ.12 ರಂದು ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ,ಫೆ.13ರಂದು ರಾತ್ರಿ ಆಲಂಕಾರು ಗ್ರಾಮದ ಬಸ್ಸು ನಿಲ್ದಾಣದಲ್ಲಿ ರಾತ್ರಿ ಹೊತ್ತು ಮಲಗಿದವರು ಮಲಗಿದ್ದ ಸ್ಥಿತಿಯಲ್ಲಿ ಮೃತ ಪಟ್ಟಿರುವುದನ್ನು ಚಿಕ್ಕಪ್ಪನ ಮಗ ತಿಳಿಸಿದ್ದರು ಎಂದು ತಿಳಿಸಿದ್ದಾರೆ.

ಕೆಲವು ವರ್ಷಗಳಿಂದ ವಿಪರೀತ ಮಧ್ಯಪಾನ ಸೇವಿಸುವ ಅಭ್ಯಾಸ ಹೊಂದಿದ್ದು ಸರಿಯಾಗಿ ಆಹಾರ ಸೇವಿಸದೇ ಇರುತ್ತಿದ್ದುದು ಸಾವಿಗೆ ಕಾರಣವಾಗಿರಬಹುದೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

You may also like

Leave a Comment