Viral Audio: ಪ್ರತ್ಯೇಕ ಪರಿವಾರ, ಪ್ರತ್ಯೇಕ ಅಭ್ಯರ್ಥಿ ಘೋಷಣೆ ಮೂಲಕ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಕರಾವಳಿ ಭಾಗದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಅರುಣ್ ಕುಮಾರ್ ಪುತ್ತಿಲರ ನೇತೃತ್ವದ ‘ಪುತ್ತಿಲ ಪರಿವಾರ'(Puttila parivara) ಬಿಜೆಪಿಯೊಂದಿಗೆ ವಿಲೀನವಾಗಿ, ಪರಿವಾರದ ನಾಯಕ ಅರುಣ್ ಅವರು ಇದೀಗ ಬಿಜೆಪಿ ಮುಖಂಡರಾಗಿದ್ದಾರೆ. ಈ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ(Arun Kumar Puttila)ರದ್ದು ಎನ್ನಲಾದ, ಮಹಿಳೆಯೊಂದಿಗೆ ಮಾತನಾಡಿರುವ ಆಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಕರಾವಳಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ವಿಧಾನಸಭಾ ಚುನಾವಣೆಯಲ್ಲಿ(Assembly Election) ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದು ಪ್ರತ್ಯೇಕ ಸ್ಪರ್ಧೆಯ ಸಮರ ಸಾರಿ, ರಾಷ್ಟ್ರೀಯ ಪಕ್ಷಗಳನ್ನೇ ನಡುಗಿಸಿ, ಲೋಕಸಭಾ ಟಿಕೆಟ್ ಗಾಗಿ ಕಾದು, ದೆಹಲಿಗಲಿದು, ಬಸವಳಿದು ಅದೂ ಕೈಪ್ಪಿದಾಗ ಕೊನೆಗೆ ಬೇರೆ ದಾರಿ ಕಾಣದೆ ಪುತ್ತಿಲ ಪರಿವಾರವನ್ನು ಬಿಜೆಪಿ(BJP)ಯೊಂದಿಗೆ ವಿಲೀನಗೊಳಿಸಿ ಇದೀಗ ಬಿಜೆಪಿ ನಾಯಕ ಎನಿಸಿರುವ ಅರುಣ್ ಕುಮಾರ್ ಪುತ್ತಿಲರದ್ದು ಎನ್ನಲಾದ ಆಡಿಯೋದಲ್ಲಿ ಕಿಲಕಿಲನೆ ಕಿಸಿಯುತ್ತಾ ‘ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ’ ಎಂದು ಗಹಗಹಿಸಿಕೊಂಡು ನಗುತ್ತಾ ಮಹಿಳೆಯೊಂದಿಗೆ ಸಲುಗೆಯಿಂದ ಮಾತನಾಡಿರೋದು ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಕಿಚ್ಚೆಬ್ಬಿಸಿದೆ. ಇದರಲ್ಲಿ ಅವರು ಬಿಜೆಪಿ ಪಕ್ಷ ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ಆಘಾತಕಾರಿ ಹೇಳಿಕೆಗಳನ್ನು ನೀಡಿರುವುದು ಭಾರೀ ಅಚ್ಚರಿ ಮೂಡಿಸಿದೆ. ಹಾಗಿದ್ರೆ ಏನಿದೆ ಆ ಆಡಿಯೋದಲ್ಲಿ?
ಏನಿದೆ ವೈರಲ್ ಆಡಿಯೋದಲ್ಲಿ?
ಆಡಿಯೋದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ನಿಂತಿದ್ ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. ಅಲ್ಲದೆ ಪುತ್ತಿಲ ಪರಿವಾರ ಇತಿಹಾಸ ಪುಟ ಸೇರಿತು ಎಂದು ಹೀಗಳೆದಿದ್ದಾರೆ. ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನೊ ಹೋಲುವ ವ್ಯಕ್ತಿ ‘ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ’ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಪುತ್ತಿಲರದ್ದು ಎನ್ನಲಾದ ಧ್ವನಿ ‘ನಾಚಿಕೆ, ಹೇಸಿಗೆಯನ್ನೆಲ್ಲಾ ಬಿಟ್ಟವರೇ ಪೊಲಿಟೀಶಿಯನ್ ಎನಿಸಿಕೊಳ್ಳುತ್ತಾರೆ. ಮಾನ ಮರ್ಯಾದೆ ಎರಡು ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾಧ್ಯವಿಲ್ಲ. ಅದನ್ನು ಬಿಟ್ಟು ಪರಿವಾರದ ಜನ ದೊಡ್ಡವರಾಗಿದ್ದಾರೆ. ಇನ್ನು ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ’ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ ‘ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ, ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಮಹಿಳೆ ಹೆಜ್ಜೆ ಹೆಜ್ಜೆಗೂ ಪುತ್ತಿಲರ ಧ್ವನಿಯಲ್ಲಿ ಮಾತನಾಡುವವರನ್ನು ಹೀಗಳೆಯುತ್ತಾರೆ. ಬಿಜೆಪಿ ಸೇರಿ ಹಾಳಾಗಿದ್ದೀರಿ, ಮುಳುಗಿತು ನಿಮ್ಮ ಪಕ್ಷ, ಬಿಜೆಪಿಯಲ್ಲಿ ನಿಮಗೆ ಮರ್ಯಾದೆಯೇ ಇಲ್ಲ. ಇರುವ ಜನರನ್ನೂ ಕಳಕೊಂಡಿರಿ ಎಂದೆಲ್ಲಾ ಆಡಿಕೊಳ್ಳುತ್ತಾರೆ.
ಇಬ್ಬರ ವೈಯಕ್ತಿಕ ಸಂಭಾಷಣೆಯ ಆಡಿಯೋ ಇಲ್ಲದೆ
https://youtu.be/eq0IDrnFcyM?si=pDKsKF0DgrZejF2w
