Home » ಮೊಗ್ರಾಲ್ ಪುತ್ತೂರು : ರಿಕ್ಷಾ ಪಲ್ಟಿ ,ಓರ್ವ ಸಾವು

ಮೊಗ್ರಾಲ್ ಪುತ್ತೂರು : ರಿಕ್ಷಾ ಪಲ್ಟಿ ,ಓರ್ವ ಸಾವು

by Praveen Chennavara
0 comments

ಕಾಸರಗೋಡು : ಮೊಗ್ರಾಲ್‌ ಪುತ್ತೂರಿನಲ್ಲಿ ಆಟೋರಿಕ್ಷಾವೊಂದು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಗದಗ ಸಿತ್ತಾರಹಳ್ಳಿ ನಿವಾಸಿ ಎಲ್ಲಪ್ಪ ಅವರ ಪುತ್ರ ಸೂರ್ಲು ಮೀಪುಗುರಿಯಲ್ಲಿ ವಾಸವಾಗಿರುವ ಮೋನಪ್ಪ (31)ಮೃತರು

ಅವರು ಕೂಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಮೊಗ್ರಾಲ್‌ ಪುತ್ತೂರು ಕಂಬಾರು ರಸ್ತೆಯ ಎಡಚೇರಿ ಎಂಬಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ತೋಡಿಗೆ ಬಿದ್ದಿದೆ.

ಆಟೋರಿಕ್ಷಾದೊಳಗೆ ಸಿಲುಕಿ ದವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.

ಆಟೋ ಚಾಲಕ ಬೆಳ್ಳೂರಿನ ಸುಬೈರ್‌ (33) ಮತ್ತು ಹೊನ್ನಪ್ಪ ಗಂಭೀರ ಗಾಯಗೊಂಡಿದ್ದಾರೆ. ಮೋನಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

You may also like

Leave a Comment