Home » ಬಂಟ್ವಾಳ : ಇಂಟರ್ ವ್ಯೂ ಎಂದು ಹೋದ ಯುವತಿ ನಾಪತ್ತೆ!

ಬಂಟ್ವಾಳ : ಇಂಟರ್ ವ್ಯೂ ಎಂದು ಹೋದ ಯುವತಿ ನಾಪತ್ತೆ!

0 comments

ಬಂಟ್ವಾಳ: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಬಂಟ್ವಾಳ ತಾಲೂಕಿನ ಇಡಿದು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ.

ಕಂಬಳಬೆಟ್ಟು ನಿವಾಸಿ ದಿವಂಗತ ಆನಂದ ಅವರ ಪುತ್ರಿ ಸುಶ್ಮಿತಾ (21) ಎಂಬಾಕೆಯೇ ನಾಪತ್ತೆಯಾದ ಯುವತಿ. ನವೆಂಬರ್ 8 ಮಂಗಳವಾರ ಬೆಳಿಗ್ಗೆ ಮನೆಯಿಂದ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

ಕೆಲಸಕ್ಕೆ ಇಂಟರ್‌ವ್ಯೂ ಲೆಟರ್ ಬಂದಿದ್ದು, ಹಾಗಾಗಿ ನಾನು ಹೋಗಿ ಬರುತ್ತೇನೆ ಎಂದು ಮನೆಯವರಲ್ಲಿ ಹೇಳಿ ತೆರಳಿದ್ದು, ನಂತರ ಮನೆಗೆ ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ.

ಹೆತ್ತವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಯುವತಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

You may also like

Leave a Comment