Home » ವಿಪರೀತ ಜ್ವರದಿಂದ ಒಂದೇ ಮನೆಯ ಇಬ್ಬರು ಮಕ್ಕಳು ಮೃತ್ಯು

ವಿಪರೀತ ಜ್ವರದಿಂದ ಒಂದೇ ಮನೆಯ ಇಬ್ಬರು ಮಕ್ಕಳು ಮೃತ್ಯು

by Praveen Chennavara
3 comments

ಬೆಳ್ತಂಗಡಿ : ವಿಪರೀತ ಜ್ವರದಿಂದ ಸಹೋದರರಿಬ್ಬರು 24 ಗಂಟೆಗಳ ಅವಧಿಯಲ್ಲಿ ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಲಾಡಿ ಎಂಬಲ್ಲಿ ನಡೆದಿದೆ.

ಸಫ್ಘಾನ್ ಮತ್ತು ಸಿನಾನ್ ಮೃತ ಮಕ್ಕಳು, ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಮನೆಯಲ್ಲೇ ಇದ್ದ ಮದ್ದು ನೀಡುತ್ತಿದ್ದು, ಎಷ್ಟೇ ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗಿರಲಿಲ್ಲ. ಜ್ವರ ಉಲ್ಬಣಗೊಂಡ ಬಳಿಕ ಮಂಗಳೂರು ಆಸ್ಪತ್ರೆಗೆ ಕರೆತರಲಾಗಿದೆ. ಒಂದು ಮಗು ಸೋಮವಾರ ಮಧ್ಯಾಹ್ನ ಮೃತಪಟ್ಟರೆ ಮತ್ತೊಂದು ಮಗು ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ.

ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

You may also like

Leave a Comment