Home » ಬೆಳ್ತಂಗಡಿ: ವಿಪರೀತ ಮದ್ಯ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ವಿಪರೀತ ಮದ್ಯ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಶರಣು

0 comments

ವಿಪರೀತ ಮದ್ಯಪಾನ ಸೇವಿಸಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮುಂಡತ್ತೋಡಿ ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು 48 ವರ್ಷ ಪ್ರಾಯದ ಕರಿಯಪ್ಪ ಎಂದು ತಿಳಿದು ಬಂದಿದೆ.

ಇವರು ಗದಗ ಜಿಲ್ಲೆಯ, ಸುರಣಿಗೆ ಗ್ರಾಮದವರಾಗಿದ್ದು, ಪ್ರಸ್ತುತ ಉಜಿರೆ ಗ್ರಾಮದ ಮುಂಡತ್ತೋಡಿ ಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವಿಪರೀತ ಮದ್ಯಪಾನ ಸೇವಿಸಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಪತ್ನಿಗೆ ಹಾಗೂ ಮಕ್ಕಳಿಗೆ ಹೊಡೆದು ಹಿಂಸೆ ನೀಡುತ್ತಿದ್ದರು. ಹಾಗಾಗಿ ಪತ್ನಿ ತಮ್ಮ ಮಕ್ಕಳನ್ನು ಅತ್ತೆ ಮನೆಗೆ ಕಳುಹಿಸಿದ್ದರು.

ನಿನ್ನೆ ವಿಪರೀತ ಕುಡಿದು ಮತ್ತಿನಲ್ಲಿದ್ದ ಕರಿಯಪ್ಪ ಅವರು ಮಕ್ಕಳನ್ನು ಯಾಕೆ ಕರೆಸಿಲ್ಲ ಎಂದು ಪತ್ನಿಗೆ ಅವಾಚ್ಯವಾಗಿ ಬೈದು ಮನನೊಂದು ಮನೆಯ ಮೇಲ್ಭಾಗದ ಕಬ್ಬಿಣದ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment