Home » Praveen Nettaru: ಪ್ರವೀಣ್ ನೆಟ್ಟಾರ್ ತಾಯಿಗೆ ಮೋದಿ ಭೇಟಿಯ ಅವಕಾಶ ಕೊಟ್ಟ ಬಿಜೆಪಿ, ಮಾತು ಕೊಟ್ಟಂತೆ ಸೌಜನ್ಯಳ ತಾಯಿಗೆ ಯಾಕಿಲ್ಲ ಅವಕಾಶ ? ಮೀಡಿಯಾ ಪ್ರಶ್ನೆಗೆ ಬಿಜೆಪಿ ನಿರುತ್ತರ !

Praveen Nettaru: ಪ್ರವೀಣ್ ನೆಟ್ಟಾರ್ ತಾಯಿಗೆ ಮೋದಿ ಭೇಟಿಯ ಅವಕಾಶ ಕೊಟ್ಟ ಬಿಜೆಪಿ, ಮಾತು ಕೊಟ್ಟಂತೆ ಸೌಜನ್ಯಳ ತಾಯಿಗೆ ಯಾಕಿಲ್ಲ ಅವಕಾಶ ? ಮೀಡಿಯಾ ಪ್ರಶ್ನೆಗೆ ಬಿಜೆಪಿ ನಿರುತ್ತರ !

by ಹೊಸಕನ್ನಡ
0 comments
Praveen Nettaru

Praveen Nettaru: ಮತ್ತೆ ಮತ್ತೆ ಬಿಜೆಪಿ ಬೇಕು ಬೇಕೆಂತಲೇ ಎಡವುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ದುಷ್ಕರ್ಮಿಗಳ ಕೈಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರ್ ಅವರ ತಾಯಿಯನ್ನು ಭೇಟಿ ಮಾಡಿದ್ದಾರೆ. ಆದರೆ ನಿರಂತರವಾಗಿ 12 ವರ್ಷಗಳಿಂದ ತಮ್ಮ ಮಗಳ ಸಾವಿಗೆ ಹೋರಾಡುತ್ತಿರುವ ಕುಸುಮಾವತಿಯವರನ್ನು ಭೇಟಿಯಾಗದೆ ಹೋದುದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಆಕ್ರೋಶಕ್ಕೆ ಕಾರಣವಾಗಿದೆ. ಮೊನ್ನೆ ಎ.14 ಸಂಜೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಏರ್ ಪೋರ್ಟ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರೊಂದಿಗೆ ಸ್ವಾಗತಿಸುವ ಸಾಲಿನಲ್ಲಿ ಹುತಾತ್ಮ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಲಾಗಿತ್ತು.

ಈ ಭೇಟಿಯ ಅವಕಾಶ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಗೌರವವಾಗಿದ್ದು, ಪ್ರವೀಣ್ ನೆಟ್ಟರ್ ತಾಯಿಗೆ ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರಕಿದ ವಿಷಯವನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಂಡಿತ್ತು. ವ್ಯಾಪಕ. ಆದರೆ ಈಗ ಬಿಜೆಪಿಯ ಪ್ರಚಾರದ ಈ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದು ”ಮೋದಿಯವರನ್ನು ಭೇಟಿ ಮಾಡಿಸುತ್ತೇವೆ” ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಬಿಜೆಪಿ ಮುಖಂಡರಿಗೆ ಸೌಜನ್ಯ ತಾಯಿ ನೆನಪಾಗಲಿಲ್ಲವೇ ಎಂಬ ಪ್ರಶ್ನೆ‌ಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಜ್ಞಾವಂತರು ಇಡುತ್ತಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಬೆಳ್ತಂಗಡಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸುತ್ತಿರುವ ಸೌಜನ್ಯ ತಾಯಿ ಕುಸುಮಾವತಿಯವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಭೇಟಿ ಮಾಡಿಸುತ್ತೇವೆ ಎಂದು ದಕ್ಷಿಣಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಒತ್ತಾಯಿಸಿದ್ದರು. ಇನ್ನು ಎರಡು ತಿಂಗಳುಗಳಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರನ್ನು ಪ್ರಧಾನಿ ಮೋದಿಯ ಭೇಟಿ ಮಾಡಿಸಲಾಗುತ್ತದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಹೇಳಿದ್ದರು. ಆದರೆ ಅದೆಲ್ಲ ಬರಿಯ ನಾಟಕ ಎನ್ನುವುದು ಈಗ ಸಾಬೀತಾಗಿದೆ.

ಆ ನಂತರದ ದಿನಗಳಲ್ಲಿ ದೆಹಲಿ ಚಲೋ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಜನಾಂದೋಲನದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಆ ಬಳಿಕ ನಮ್ಮ ನೆರವಿಗೆ ಬಂದಿಲ್ಲ. ಪ್ರಧಾನಿ ಅವರನ್ನು ಭೇಟಿ ಮಾಡಬೇಕು ಎಂಬ ಉದ್ದೇಶದಿಂದ ದೆಹಲಿಗೆ ಬಂದಿದ್ದೇವೆ’ ಮೋದಿ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಸಂಸದರು ಮತ್ತು ಶಾಸಕ ಹರೀಶ್ ಪೂಂಜಾ ಮಾತುಕೊಟ್ಟು ಮರೆತು ಬಿಟ್ಟಿದ್ದಾರೆ ಎಂದು ಸೌಜನ್ಯ ತಾಯಿ ಕುಸುಮಾವತಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಲೋಕಸಭಾ ಚುನಾವಣೆ ಹತ್ತಿರ ಆದಾಗ ಯಾವುದೇ ದಾರಿ ಕಾಣದೆ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಸಹಾಯಕ್ಕೆ ನಿಲ್ಲದೆ ಇರುವುದನ್ನು ಕಂಡು ಸೌಜನ್ಯ ಪರ ಹೋರಾಟಗಾರರು ನೋಟ ಚಳವಳಿಗೆ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ ; ಕಳೆದ ಜೂನ್ ನಿಂದ ಅಶ್ಲೀಲ ವಿಡಿಯೋ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ; ಉಜಿರೆ SDM ಶಾಲೆ ಶಿಕ್ಷಕ ಪೋಲೀಸ್ ವಶಕ್ಕೆ !!

ಸೌಜನ್ಯಳ ನ್ಯಾಯಕ್ಕಾಗಿ ನೋಟಾ ಅಭಿಯಾನ ಆರಂಭಿಸಿರುವ ಹೋರಾಟಗಾರರು ಇದೀಗ ಕರಾವಳಿಯ ಎಲ್ಲಾ ರಾಜಕೀಯ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಮುಖ್ಯವಾಗಿ ಬಿಜೆಪಿಗೆ ಭಾರಿ ಕಂಟಕ ತಲೆದೋರಿದೆ. ಕರಾವಳಿ ರಾಜಕೀಯದಲ್ಲಿ ಬದಲಾವಣೆಗಳ ಹೊಸ ಬಿರುಗಾಳಿ ಬೀಸುತ್ತಿದೆ. ಕೇವಲ ನೋಟಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಮತ ಬೀಳುವುದು ಖಾತರಿಯಾಗಿದೆ.

You may also like

Leave a Comment