Home » ಸುಳ್ಯ: ಕಾರು -ಸ್ಕೂಟರ್ ಡಿಕ್ಕಿ ,ಕುಕ್ಕುಜಡ್ಕದ ಯುವಕ ಮೃತ್ಯು

ಸುಳ್ಯ: ಕಾರು -ಸ್ಕೂಟರ್ ಡಿಕ್ಕಿ ,ಕುಕ್ಕುಜಡ್ಕದ ಯುವಕ ಮೃತ್ಯು

by Praveen Chennavara
0 comments
Sullia

Sullia : ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ (sullia) ತಾಲೂಕಿನ ಅರಂತೋಡು ಗೂನಡ್ಕದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೃತಪಟ್ಟ ಯುವಕನನ್ನು ಕುಕ್ಕುಜಡ್ಕದ ಸಂಕೇಶ ನಿವಾಸಿ ನವೀನ್ ಸಂಕೇಶ ಎಂದು ಗುರುತಿಸಲಾಗಿದೆ.

ನವೀನ್ ಅವರು ಮುತ್ತೂಟ್ ಫೈನಾನ್ಸ್‌ನಲ್ಲಿ ರಿಕವರಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದು,ಕರ್ತವ್ಯ ನಿಮಿತ್ತ ಗೂನಡ್ಕಕ್ಕೆ ಹೋಗಿದ್ದು ,ಅಲ್ಲಿ ಅವರ ಸ್ಕೂಟರ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ.

ಕಾರು ಚಾಲಕ ಅತೀಯಾದ ವೇಗದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ

ನವೀನ್ ಸಂಕೇಶ ಅವರು ತಂದೆ-ತಾಯಿಗೆ ಏಕೈಕ ಪುತ್ರನಾಗಿದ್ದು,ಇವರ ನಿಧನದಿಂದ ಇಡೀ ಊರಲ್ಲಿ ಮೌನ ಆವರಿಸಿದೆ.

You may also like

Leave a Comment