Home » Dakshina Kannada: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್‌ ದಾಖಲು

Dakshina Kannada: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್‌ ದಾಖಲು

0 comments
Dakshina Kannada

Dakshina Kannada: ಬಿಜೆಪಿ ಕಾರ್ಯಕರ್ತರು ಕೊಣಾಜೆ ಠಾಣಾ ವ್ಯಾಪ್ತಿಯ ಬೊಳಿಯಾರ್‌ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಜೊತೆಗೆ ಪ್ರಚೋದನಾಕಾರಿ ಘೋಷಣೆ ಕೂಗಿದ ಆರೋಪದಲ್ಲಿ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕೂಡಾ ಎಫ್‌ಐಆರ್‌ ದಾಖಲು ಮಾಡಲಾಗಿದೆ.

Yuva Rajkumar: “ಏನಾಗಿದೆ ಎಂದು ಚಿತ್ರರಂಗ ಹಾಗೂ ಮಾಧ್ಯಮದ ಅನೇಕರಿಗೆ ತಿಳಿದಿದೆ”-ಯುವ ಪತ್ನಿ ಶ್ರೀದೇವಿ ಭೈರಪ್ಪ ಮೊದಲ ಪ್ರತಿಕ್ರಿಯೆ

ಬೋಳಿಯಾರ್‌ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ, ನಿನೆ ರಾತ್ರಿ 8.50 ರ ಸುಮಾರಿಗೆ ಕೆಲ ಯುವಕರು ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆಂದು ಆರೋಪ ಮಾಡಿದ್ದಾರೆ. ಘೋಷಣೆ ಕೂಗುವ ಸಮಯದಲ್ಲಿ ಮಸೀದಿ ಬಳಿ ನಿಂತಿದ್ದವರಿಗೂ ಕೆಟ್ಟ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಹೀಗಾಗಿ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಹೀಗಾಗಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರಾದ ಸುರೇಶ್‌, ವಿನಯ್‌, ಸುಭಾಷ್‌, ರಂಜಿತ್‌, ಧನಂಜಯ್‌ ವಿರುದ್ಧ ಐಪಿಸಿ ಸೆಕ್ಷನ್‌ 143,147,148,153A,504,506,149 ಅಡಿ ಪ್ರಕರಣ ದಾಖಲಾಗಿದೆ. ಕೊಣಾಜೆ ಠಾಣೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

ಘಟನೆ ವಿವರ:
ನರೇಂದ್ರ ಮೋದಿ ಪ್ರಮಾಣ ವಿಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದ್ದು, ಮೆರವಣಿಗೆ ಸಂದರ್ಭ ಮಸೀದಿ ಬಳಿ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ ಎಂದು ಆರೋಪ ಮಾಡಿ 20-25 ಬೈಕ್‌ಗಳಲ್ಲಿ ಮುಸ್ಲಿಂ ಯುವಕರ ತಂಡ ಕಾರ್ಯಕರ್ತರನ್ನು ಹಿಂಬಾಲಿಸಿಕೊಂಡು ಬಂದು, ಚಾಕು ಇರಿದು ಪರಾರಿಯಾಗಿದ್ದರು.

ಶಾಕೀರ್‌ (28), ಅಬ್ದುಲ್‌ ರಜಾಕ್‌ (40), ಅಬೂಬಕ್ಕರ್‌ ಸಿದ್ದಿಕ್‌ (35), ಸವಾದ್‌ (18), ಹಫೀಝ್‌ (24) ಆರೋಪಿಗಳನ್ನು ಬಂಧನ ಮಾಡಲಾಗಿದೆ.

Modi 3.0 Cabinet: ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ ವಿವರ ಇಲ್ಲಿದೆ; ಕುಮಾರಸ್ವಾಮಿ, ಶೋಭಾ, ಸೋಮಣ್ಣಗೆ ಯಾವ ಖಾತೆ?

You may also like

Leave a Comment