10
Dakshina Kannada: ಐದು ತಿಂಗಳಿನಿಂದ ಕಾದ ಕೆಂಡದಂತಿದ್ದ ಇಳೆಗೆ ಇಂದು ಮಂಗಳೂರಿನಾದ್ಯಂತ ವರುಣನ ಆಗಮನವಾಗಿದ್ದು, ಮೊದಲ ಮಳೆಗೆನೇ ರಸ್ತೆಯಲ್ಲೇ ಮಣ್ಣುಮಯವಾಗಿದೆ. ಪಣಕಜೆ ಸಮೀಪದ ರಸ್ತೆ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಇಂದು (ಎ.20) ರಂದು ಬೆಳಿಗ್ಗೆ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಬಿದ್ದಿರುವ ಘಟನೆಗೆ ನಡೆದಿದೆ.
ಇದನ್ನೂ ಓದಿ: Putturu: ಪುತ್ತೂರಿನ ವಿವಾಹಿತ ಮಹಿಳೆ ಅನ್ಯಧರ್ಮದ ಯುವಕನ ಪರಾರಿ; ಲವ್ಜಿಹಾದ್ ಪ್ರಕರಣ ಎಂದು ಪತಿ ಆರೋಪ
ಬೆಳಗ್ಗಿನ ಸಮಯದಲ್ಲಿ ಹೆಚ್ಚಿನ ಜನರು ಕೆಲಸಕ್ಕೆಂದು ಹೋಗುವವರು ಮಾರ್ಗದ ಬದಿಯ ಕೆಸರಿನಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಹಾಗೂ ವಾಹನ ಸಂಚಾರ ಕೂಡಾ ಅಡಚಣೆ ಉಂಟಾಯಿತು. ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ನೀರು ರಸ್ತೆಯಲ್ಲಿ ನಿಂತು ಕೆರೆ ನಿರ್ಮಾಣವಾದ ಪರಿಸ್ಥಿತಿ ಉಂಟಾಗಿದೆ.
