Home » Mangaluru: ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ -ಓರ್ವ ಯುವತಿ ಮೃತ್ಯು ,ನಾಲ್ವರು ಗಂಭೀರ !

Mangaluru: ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ -ಓರ್ವ ಯುವತಿ ಮೃತ್ಯು ,ನಾಲ್ವರು ಗಂಭೀರ !

1 comment
Mangaluru

Mangaluru: ಲೇಡಿಹಿಲ್‌ ಬಳಿ ಫುಟ್‌ಪಾತ್‌ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಡಿಕ್ಕಿ ಹೊಡೆದ ಕಾರು, ಪರಿಣಾಮ ಓರ್ವ ಯುವತಿ ಮೃತಪಟ್ಟ ಘಟನೆ ಇಂದು (ಅ.18) ರ ಸಂಜೆ ನಡೆದಿದೆ. ಮೃತ ಯುವತಿಯನ್ನು ರೂಪಶ್ರೀ (23) ಎಂದು ಗುರುತಿಸಲಾಗಿದೆ.

ಮೃತ ರೂಪಶ್ರೀ

ಐದು ಮಂದಿ ಯುವತಿಯರು ಮಂಗಳೂರು ಕಾರ್ಪೋರೇಷನ್‌ ಈಜುಕೊಳದ ಬಳಿ ಲೇಡಿಹಿಲ್‌ನಿಂದ ಮಣ್ಣಗುಡ್ಡ ಜಂಕ್ಷನ್‌ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಉಳಿದ ನಾಲ್ಕು ಯುವತಿಯರು ಗಂಭೀರ ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಘಟನೆಯಲ್ಲಿ ಸ್ವಾತಿ (26), ಹಿತ್ನವಿ (16) ಕೃತಿಕಾ (16) ಮತ್ತು ಯತಿಕಾ (12) ಎಂಬುವವರು ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಅಪ್ಪಳಿಸಿರುವ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೇಡಿ ಹಿಲ್ ಕಡೆಯಿಂದ ಬರುತ್ತಿದ್ದ ಕಾರು ಅತಿ ವೇಗದಿಂದ ಬಂದು ರಸ್ತೆ ಬಿಟ್ಟು ಫುಟ್ ಪಥ ನಲ್ಲಿ ನಡೆದುಹೋಗುತ್ತಿದ್ದ ಹುಡುಗೀರಯನ್ನು ಎತ್ತಿ ಬಿಸಾಡಿದೆ. ಕೆಲವರ ಮೇಲೆ ಕಾರು ಹರಿದು ಹೋಗಿದೆ. ಅಲ್ಲದೆ, ದಾರಿಯಲ್ಲಿ ಹೋಗುತ್ತಿದ್ದ ಒಬ್ಬಳನ್ನು 50 ಅಡಿ ದೂರಕ್ಕೆ ಚಿಮ್ಮಿಸಿ ಆ ಕಡೆಯ ರೋಡ ಡಿವೈಡರ್ ತನಕ ಚಿಮ್ಮಿಸಿ ಹೋಗಿದೆ ಕಾರು. ಒಟ್ಟಾರೆ ಭೀಕರವಾಗಿ ಭಯಪಡಿಸುವ ಹಾಗೆ ಅಪಘಾತ ನಡೆದಿದೆ.

ಮಣ್ಣಗುಡ್ಡ ಜಂಕ್ಷನ್‌ನಿಂದ ಲೇಡಿಹಿಲ್‌ ಕಡೆಗೆ ಅಜಾಗರೂಕತೆಯಿಂದ ಬಂದ ಕಾರೊಂದು ಅತಿವೇಗದಲ್ಲಿ ಈ ಐವರು ಯುವತಿಯರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಕಮಲೇಶ್‌ ಬಲದೇವ್‌ ಪರಾರಿಯಾಗಿದ್ದು, ನಂತರ ಟ್ರಾಫಿಕ್‌ ವೆಸ್ಟ್‌ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಆದರೂ ಕಾರು ಚಾಲಕ ಪರಾರಿ ಆದದ್ದು ಜನರ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಿಜಕ್ಕೂ ಭಯಬೀಳಿಸುವಂತಿದೆ.

Kamalesh Baldev, 57, accused in the accident case.

ಆರೋಪಿ: ಕಮಲೇಶ್ ಬಲದೇವ್

Update: ಪೊಲೀಸರು ಆರೋಪಿಯ ಹೆಸರು ಕಮಲೇಶ್ ಬಲದೇವ್. ಹೆಚ್.ಎಂ. ಬಲದೇವ್ ಎಂಬವರ ಮಗನಾಗಿರುವ 57 ವರ್ಷ ಪ್ರಾಯದ ಈತ ಅಳಕೆಯ ಶಿವಂ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದಾನೆ. ವೃತ್ತಿಯಲ್ಲಿ ಕಮಿಷನ್ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಈ ವ್ಯಕ್ತಿಯಿಂದ ಭೀಕರ ಅಪಘಾತ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಯ ಮೇಲೆ ಸೆಕ್ಷನ್ 304 (A) ಪ್ರಕರಣ ಹಾಕಲಾಗಿದೆ ಮತ್ತು ಆರೋಪಿ ಕುಡಿದು ವಾಹನ ಚಾಲನೆ ಮಾಡಿದ್ದಾನಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಬೆಚ್ಚಿ ಬೀಳಿಸುವ ವೈರಲ್ ಆಕ್ಸಿಡೆಂಟ್ ವಿಡಿಯೋ ಇಲ್ಲಿದೆ ನೋಡಿ. Age Restricted Video, Be careful. Not suitable for below 18 Years.

ಇದನ್ನು ಓದಿ: Tukali Santhu: ಬರೀ ಕಿರಿಕಿರಿ, ಬರೀ ಸುಳ್ಳು, ಸಿನಿಮಾದಿಂದಲೇ ಕಿತ್ತು ಬಿಸಾಕಿದೆ – ತುಕಾಲಿ ಸಂತು ಅಸಲಿ ಮುಖ ಬಯಲು ಮಾಡಿದ ಖ್ಯಾತ ನಿರ್ದೇಶಕ !

You may also like

Leave a Comment