Bantwal: ಒಡಿಯೂರು ಶಾಲೆಗೆ ಮಾರ್ಬಲ್ ತುಂಬಿಕೊಂಡು ಬಂದ ಲಾರಿಯೊಂದು ಪಲ್ಟಿಯಾಗಿ ನಾಲ್ಕು ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ(Bantwal) ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ನಡೆದಿದೆ.


ಲಾರಿ ಪಲ್ಟಿಯಾಗಿ ಲಾರಿಯಲ್ಲಿದ್ದ ಕಾರ್ಮಿಕರ ಕೈಕಾಲುಗಳಿಗೆ ತೀವ್ರ ತರದ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ನಾಲ್ಕು ಅಂಬ್ಯುಲೆನ್ಸ್ ಗಳ ಮೂಲಕ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರು ಕಾರ್ಮಿಕರು ಉತ್ತರ ಭಾರತ ಮೂಲದವರು ಎಂದು ಗುರುತಿಸಲಾಗಿದ್ದು, ಈ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮಾರ್ಬಲ್ ಅನ್ ಲೋಡು ಮಾಡುವುದಕ್ಕಾಗಿ ಲಾರಿಯನ್ನು ಹಿಂದಕ್ಕೆ ತೆಗೆಯುವ ವೇಳೆ ಬ್ರೇಕ್ ಫೈಲ್ ಆಗಿ ಲಾರಿ ಪಲ್ಟಿಯಾಗಿದ್ದು ಲಾರಿಯಲ್ಲಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: Tragic: ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ! ದೇವರ ದರ್ಶನ ಮಾಡಿ ಬಂದವರು ಮಸಣ ಸೇರಿದ್ರು! 8 ಮಂದಿ ಸ್ಥಳದಲ್ಲೇ ಸಾವು!
