Bellare Masood murder case : ಬೆಳ್ಳಾರೆ:ಕಳೆದ 2022 ರ ಜುಲೈ 21 ರಂದು ಬೆಳ್ಳಾರೆಯಲ್ಲಿ ನಡೆದ ಮುಸ್ಲಿಂ ಯುವಕ ಮಸೂದ್ ಕೊಲೆ ಪ್ರಕರಣದಲ್ಲಿ (Bellare Masood murder case ) ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ.
ಬೆಳ್ಳಾರೆ ಸಮೀಪದ ಕಳಂಜ ಎಂಬಲ್ಲಿ ಘಟನೆ ನಡೆದಿದ್ದು, ಒಟ್ಟು ಎಂಟು ಮಂದಿ ಆರೋಪಿಗಳು ಸೇರಿ ಮಸೂದ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರಿಂದ ಎರಡು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಸೂದ್ ಮೃತಪಟ್ಟಿದ್ದ.
ಬಳಿಕ ಬೆಳ್ಳಾರೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಸುನಿಲ್, ಸುಧೀರ್, ಶಿವ,ಸದಾಶಿವ, ರಂಜಿತ್,ಅಭಿಲಾಷ್, ಭಾಸ್ಕರ್, ಜಿಮ್ ರಂಜಿತ್ ಎಂದು ಗುರುತಿಸಲಾಗಿತ್ತು.
ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿಗೆ ಈ ಹಿಂದೆ ಜಾಮೀನು ಮಂಜೂರು ಮಾಡಲಾಗಿದ್ದು, ಅಭಿಲಾಶ್ ಹಾಗೂ ಸುನಿಲ್ ಎಂಬಿಬ್ಬರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ಬಳಿಕ ಒಂದು ವರ್ಷಗಳಿಂದ ಜೈಲಿನಲ್ಲಿದ್ದಾರೆ ಎನ್ನುವ ವಾದಕ್ಕೆ ನ್ಯಾಯಾಮೂರ್ತಿ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದು,ಆರೋಪಿಗಳ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು,ಸುಯೋಗ್ ಹೇರಳೆ,ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು.
ಮಸೂದ್ ಹತ್ಯೆಯ ಬೆನ್ನಲ್ಲೇ ಪ್ರತೀಕಾರ ಎಂಬಂತೆ ಬೆಳ್ಳಾರೆಯ ಹಿಂದೂ ಮುಖಂಡ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಕೋಮು ದ್ವೇಷಕ್ಕೆ ಕಾರಣವಾಗಿದ್ದು, ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ನಲ್ಲಿ ಮುಸ್ಲಿಂ ಯುವಕ ಫಾಝಿಲ್ ಎಂಬಾತನ ಹತ್ಯೆ ನಡೆದಿತ್ತು.
ಇದನ್ನೂ ಓದಿ: ಪತಿಯ ತೀರದ ಕಾಮ ದಾಹ! ಕಾಮದಾಹಕ್ಕೆ ಸುಸ್ತಾದ ಪತ್ನಿ ಮಾಡೇ ಬಿಟ್ಲು ಮಾಸ್ಟರ್ ಪ್ಲ್ಯಾನ್!!!
