Home » Sullia: ಸುಳ್ಯ ಬಿಜೆಪಿ ಕಚೇರಿಗೆ ಕಾರ್ಯಕರ್ತರಿಂದ ಬೀಗ!

Sullia: ಸುಳ್ಯ ಬಿಜೆಪಿ ಕಚೇರಿಗೆ ಕಾರ್ಯಕರ್ತರಿಂದ ಬೀಗ!

1 comment

Sullia: ಬಿಜೆಪಿ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರ ಘೋಷಣೆ ಬೆನ್ನಲ್ಲೇ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದರಿಂದ ಕಚೇರಿಗೆ ಬೀಗ ಜಡಿದ ಪ್ರಸಂಗವೊಂದು ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ಇದನ್ನೂ ಓದಿ: Relationship Tips: ಹುಡುಗರೇ ನೀವು ಹೀಗಿದ್ರೆ ಸಾಕು, ಹುಡುಗಿಯರು ಪಕ್ಕಾ ನಿಮ್ಗೆ ಫಿದಾ ಆಗ್ತಾರೆ!

ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ಶನಿವಾರ ಘೋಷಿಸಿದ್ದರು. ಸುಳ್ಯ ಮಂಡಲದ ಅಧ್ಯಕ್ಷರಾಗಿ ಜಿಲ್ಲೆಯ ಮಾಜಿ ಉಪಾಧ್ಯಕ್ಷರೂ ಆಗಿರುವ ವೆಂಕಟ್ ವಳಲಂಬೆ ಎರಡನೇ ಬಾರಿಗೆ ಅವಕಾಶ ಪಡೆದಿದ್ದರು. ಆದರೆ, ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಕೋರ್ ಕಮಿಟಿ, ಜಿಲ್ಲಾ ಸಮಿತಿಗೆ ಮಾಜಿ‌ ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಅವರ ಹೆಸರನ್ನು ಕಳುಹಿಸಿತ್ತು.

ಶನಿವಾರ ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ಘೋಷಣೆ ಮಾಡಿದ್ದು, ಸುಳ್ಯ ಮಂಡಲದ ಅಧ್ಯಕ್ಷರಾಗಿ ಜಿಲ್ಲೆಯ ಮಾಜಿ ಉಪಾಧ್ಯಕ್ಷರೂ ಆಗಿರುವ ವೆಂಕಟ್‌ ವಳಲಂಬೆ ಎರಡನೇ ಬಾರಿಗೆ ಅವಕಾಶ ದೊರಕಿತ್ತು. ಆದರೆ ಅಧ್ಯಕ್ಷರ ಆಯ್ಕೆಗೆ ವಿನಯಕುಮಾರ್‌ ಅವರ ಹೆಸರಿನ ಬದಲಿಗೆ ವೆಂಕಟ್‌ ಅವರ ಹೆಸರು ಘೋಷಣೆಯಾಗಿದ್ದು ಇದು ಸುಳ್ಯದ ಬಿಜೆಪಿ ವಲಯದಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿತ್ತು. ಇದರಿಂದ ಕಾರ್ಯಕರ್ತರು ಸಿಟ್ಟಿಗೆದ್ದಿದ್ದು, ಈ ಕಾರಣದಿಂದ ಪಕ್ಷದ ಕಚೇರಿಗೆ ಬೀಗ ಜಡಿದ ಘಟನೆ ನಡೆಯಿತು.

You may also like

Leave a Comment