Home » ಧರ್ಮಸ್ಥಳ: ಅನ್ಯಧರ್ಮದ ಯುವಕನೊಂದಿಗೆ ಯುವತಿ ಪರಾರಿ!! ಹಿಂಜಾವೇ ವಿಟ್ಲ ಹಾಗೂ ಧರ್ಮಸ್ಥಳ ಪೊಲೀಸರ ದಾಳಿ-ಸುಳ್ಯ ಸಮೀಪ ಜೋಡಿ ವಶಕ್ಕೆ

ಧರ್ಮಸ್ಥಳ: ಅನ್ಯಧರ್ಮದ ಯುವಕನೊಂದಿಗೆ ಯುವತಿ ಪರಾರಿ!! ಹಿಂಜಾವೇ ವಿಟ್ಲ ಹಾಗೂ ಧರ್ಮಸ್ಥಳ ಪೊಲೀಸರ ದಾಳಿ-ಸುಳ್ಯ ಸಮೀಪ ಜೋಡಿ ವಶಕ್ಕೆ

0 comments

ಧರ್ಮಸ್ಥಳ: ಇಲ್ಲಿನ ಸ್ಥಳೀಯ ಯುವತಿಯೊರ್ವಳನ್ನು ಅನ್ಯಧರ್ಮದ ಯುವಕನೋರ್ವ ಮದುವೆಯಾಗುವ ನೆಪದಲ್ಲಿ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲದ ಹಿಂದೂ ಜಾಗರಣ ವೇದಿಕೆ ಹಾಗೂ ಧರ್ಮಸ್ಥಳ ಠಾಣಾ ಪೊಲೀಸರು ಸುಳ್ಯ ಸಮೀಪ ಜೋಡಿಯನ್ನು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.

ಧರ್ಮಸ್ಥಳ ಮೂಲದ ಯುವತಿಯು ಅನ್ಯಧರ್ಮದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದು ಈ ಮೊದಲೇ ಹಿಂಜಾವೇ ಮಾತೃ ಸುರಕ್ಷಾ ದ ಗಮನಕ್ಕೆ ಬಂದ ಕಾರಣ ಯುವತಿಯ ಮನವೊಲಿಸುವ ಪ್ರಯತ್ನ ನಡೆದಿತ್ತು. ಆದರೆ ಇಂದು ಯುವತಿ ಯುವಕನೊಂದಿಗೆ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸುತ್ತಿರುವ ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ಧರ್ಮಸ್ಥಳ ಪೊಲೀಸರ ಜೊತೆಗೂಡಿ ಜೋಡಿಯನ್ನು ಸುಳ್ಯ ಸಮೀಪ ಪತ್ತೆ ಹಚ್ಚಿದ್ದಾರೆ.

ನಿನ್ನೆಯ ದಿನ ಅನ್ಯಧರ್ಮದ ಜೋಡಿ ತೆರಳುತ್ತಿದ್ದ ಕಾರೊಂದು ಸುಳ್ಯ ಸಮೀಪವೇ ಪಲ್ಟಿಯಾಗಿ ಸುದ್ದಿಯಾದ ಬೆನ್ನಲ್ಲೇ ಇಂದು ಮತ್ತೊಂದು ಜೋಡಿ ಸುಳ್ಯದಲ್ಲೇ ಪತ್ತೆಯಾಗಿದೆ.ಸದ್ಯ ಧರ್ಮಸ್ಥಳ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದಿದ್ದು,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment