Home » ಬಂಟ್ವಾಳ: ಖಾಸಗಿ ಬಸ್ ನಲ್ಲಿ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ | ಮಾರ್ಗ ಮಧ್ಯೆ ಬಸ್ ತಡೆದ ಭಜರಂಗದಳ ಕಾರ್ಯಕರ್ತರು

ಬಂಟ್ವಾಳ: ಖಾಸಗಿ ಬಸ್ ನಲ್ಲಿ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ | ಮಾರ್ಗ ಮಧ್ಯೆ ಬಸ್ ತಡೆದ ಭಜರಂಗದಳ ಕಾರ್ಯಕರ್ತರು

1 comment

ಇತ್ತೀಚೆಗೆ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿದ್ದು, ಹಿಂದೂ ಹೆಣ್ಣುಮಕ್ಕಳು ಈ ಪ್ರಕರಣಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಅಂತಹದ್ದೆ ಪ್ರಕರಣವನ್ನು ಭಜರಂಗದಳ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ.

ಬಂಟ್ವಾಳ: ಖಾಸಗಿ ಬಸ್ ಒಂದರಲ್ಲಿ ಜೊತೆಯಾಗಿ, ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುತ್ತಿದ್ದ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿಯು ಭಜರಂಗದಳದ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕಲ್ಲಡ್ಕ ದಾಸಕೋಡಿಯಲ್ಲಿ ನಡೆದಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿ ಜೊತೆಯಾಗಿದ್ದರು. ಈ ವಿಷಯ ತಿಳಿದ ಭಜರಂಗದಳದ ಕಾರ್ಯಕರ್ತರು ದಾಸಕೋಡಿ ಬಳಿ ಬಸ್ ತಡೆದು ನಿಲ್ಲಿಸಿದ್ದಾರೆ. ನಂತರ ಯುವತಿ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿದೆ ಎನ್ನಲಾಗಿದೆ.

ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನ್ಯಕೋಮಿನ ಯುವಕ, ಹಿಂದೂ ಯುವತಿ ಹಾಗೂ ಕಾರ್ಯಕರ್ತರನ್ನು ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಯುವಕ ಮತ್ತು ಯುವತಿಯ ಹೆತ್ತವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment