7
Elephant Attack: ಹೊಸೂರು ಸಮೀಪದ ಹನುಮಂತಪುರಂನಲ್ಲಿ ಕಾಡಾನೆ ದಾಳಿಗೆ ಮಹಿಳೆಯೋರ್ವರು ಬಲಿಯಾಗಿದ್ದಾರೆ. ಮಹಿಳೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದೇ ಸ್ಥಳದಲ್ಲೇ ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಮುನಿರತ್ನ (27) ಕಾಡಾನೆ ದಾಳಿಗೆ ತುತ್ತಾಗಿ ಮೃತ ಹೊಂದಿದ ಮಹಿಳೆ. ಕೆಲಮಂಗಲ ಗ್ರಾಮಕ್ಕೆಂದು ಹೋಗಲು ಮುನಿರತ್ನ ಅವರು ಗ್ರಾಮಸ್ಥರ ಬಳಿ ಲಿಫ್ಟ್ ಕೇಳಿದ್ದಾಳೆ. ಗ್ರಾಮದ ವ್ಯಕ್ತಿಯ ಜೊತೆಗೆ ಬೈಕ್ನಲ್ಲಿ ತೆರಳುವಾಗ ಕಾಡಾನೆ ಅಡ್ಡ ಬಂದು, ದಾಳಿ ಮಾಡಿದೆ. ಬೈಕ್ನಲ್ಲಿದ್ದ ವ್ಯಕ್ತಿ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಆದರೆ ಹಿಂಬದಿಯಲ್ಲಿದ್ದ ಮುನಿರತ್ನ ಓಡಲು ಆಗದೆ ಆನೆ ದಾಳಿಗೆ ಮೃತ ಹೊಂದಿದ್ದಾಳೆ.
