Kota Srinivas Poojary: ಇತ್ತೀಚೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ತಮ್ಮ ಎದುರಾಳಿಗೆ ಹಿಂದಿಯೇ ಬರುವುದಿಲ್ಲ, ಲೋಕಸಭೆಗೆ ಹೋಗಿ ಏನು ಪ್ರಶ್ನೆ ಕೇಳುತ್ತಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಹಂಗಿಸಿ ಮಾತನಾಡಿದ್ದರು. ಆದರೆ ಇದೀಗ ಖ್ಯಾತ ಇಂಗ್ಲಿಷ್ ಟ್ರೈನರ್ ಜಿಎಲ್ ಮಂಜುನಾಥ್ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಒಂದು ತಿಂಗಳಲ್ಲಿಯೇ ಇಂಗ್ಲಿಷ್ ಕಲಿಸುವುದಾಗಿ ತಿಳಿಸಿದ್ದಾರೆ.
ಜಿಎಲ್ ಮಂಜುನಾಥ್ ಅವರು ಬೆಳಗಾವಿಯಲ್ಲಿ ಸತತ 20 ವರ್ಷಗಳಿಂದ ಟೈಮ್ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯನ್ನು ನಡೆಸುತ್ತಿದ್ದು ಈ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಣ ನೀಡುತ್ತಾ ಬಂದಿದ್ದಾರೆ.
ಕೋಟಾ ಶ್ರೀನಿವಾಸ್ ಪೂಜಾರಿಯವರು ಭಾಷೆಯ ವಿಚಾರವಾಗಿ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ನಾನು ಅವರಿಗೆ ಕೇವಲ ಒಂದೇ ತಿಂಗಳಿನಲ್ಲಿಯೇ ಇಂಗ್ಲಿಷ್’ಅನ್ನು ಕಲಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೈಕ್ ಗಳಲ್ಲಿ ಈ ಸಣ್ಣ ಬದಲಾವಣೆ ಮಾಡಿ ಸಾಕು, 90 ಕಿಮೀ ಮೈಲೇಜ್ 100% ಗ್ಯಾರಂಟಿ !!ಇಲ್ಲಿದೆ ವಿಡಿಯೋ
