Home » Kambala: ಕರಾವಳಿಯ ಜನಪ್ರಿಯ ‘ಕಂಬಳ’ ಕ್ರೀಡೆಗೆ ಪ್ರೋತ್ಸಾಹಧನ ಬಿಡುಗಡೆ

Kambala: ಕರಾವಳಿಯ ಜನಪ್ರಿಯ ‘ಕಂಬಳ’ ಕ್ರೀಡೆಗೆ ಪ್ರೋತ್ಸಾಹಧನ ಬಿಡುಗಡೆ

0 comments
Kambala

Kambala: ಕರಾವಳಿಯ ಜನಪ್ರಿಯಕಂಬಳ ಕ್ರೀಡೆಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 2024- 25 ನೇ ಸಾಲಿನಲ್ಲಿ ನಡೆದ ಕಂಬಳಕ್ಕೆ ಕ್ರೀಡಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಪ್ರೋತ್ಸಾಹ ಧನ ಬಿಡುಗಡೆಗೆ ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಕಂಬಳಗಳಿಗೆ 50 ಲಕ್ಷ ರೂಪಾಯಿ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ಕಂಬಳಗಳಿಗೆ ತಲಾ ಎರಡು ಲಕ್ಷ ರೂ.ನಂತೆ ಒಟ್ಟು 40 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ಕ್ರೀಡಾ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ.

You may also like