Home » ಶಿರಾಡಿಯ ಅಡ್ಡಹೊಳೆಯಲ್ಲಿ ಕಾರು ಮತ್ತು ಬಸ್ ಮಧ್ಯೆ ಅಪಘಾತ

ಶಿರಾಡಿಯ ಅಡ್ಡಹೊಳೆಯಲ್ಲಿ ಕಾರು ಮತ್ತು ಬಸ್ ಮಧ್ಯೆ ಅಪಘಾತ

by Praveen Chennavara
0 comments

ಕಡಬ : ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಕಾರು ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿದೆ.

ಈ ಘಟನೆಯಲ್ಲಿ ಕಡಬ ತಾಲೂಕಿನ ರಾಮಕುಂಜದ ಉಪನ್ಯಾಸಕ ಗೋವಿಂದರಾಜ್ (32) ಮತ್ತು ಓಂಕಾರ್ ಪ್ರಸಾದ್ (30) ಗಾಯಗೊಂಡಿದ್ದಾರೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯನಿಮಿತ್ತ ಕಾರಿನಲ್ಲಿ ಸಕಲೇಶಪುರದ ಕಡೆಗೆ ಹೋಗಿ, ರಾಮಕುಂಜಕ್ಕೆ ವಾಪಾಸು ಬರುವಾಗ, ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಲು ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇಬ್ಬರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು- ಬೈಕ್ ಡಿಕ್ಕಿ ಕಾರು ಮತ್ತು ಬಸ್ ನಡುವಿನ ಅಪಘಾತಕ್ಕೂ ಸ್ವಲ್ಪ ಮೊದಲು ಅದೇ ಸ್ಥಳದಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ, ಬೆಂಗಳೂರು ಮೂಲದ ಭರತ್ (24) ಅವರು ಗಾಯಗೊಂಡಿದ್ದು ಅವರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

You may also like

Leave a Comment