Home » ಕಡಬ: ಹಿಂದೂ ಯುವಕನನ್ನು ಮದುವೆಯಾಗಿ ಕಾಣೆಯಾಗಿದ್ದ ಮುಸ್ಲಿಂ ಮಹಿಳೆ ಕಡಬದಲ್ಲಿ ಪತ್ತೆ!!

ಕಡಬ: ಹಿಂದೂ ಯುವಕನನ್ನು ಮದುವೆಯಾಗಿ ಕಾಣೆಯಾಗಿದ್ದ ಮುಸ್ಲಿಂ ಮಹಿಳೆ ಕಡಬದಲ್ಲಿ ಪತ್ತೆ!!

0 comments

ಕಡಬ: ಮಡಿಕೇರಿಯಲ್ಲಿ ಹಿಂದೂ ಯುವಕನೊಬ್ಬನನ್ನು ಮದುವೆಯಾಗಿ ಆ ಬಳಿಕ ನಾಪತ್ತೆಯಾಗಿದ್ದ ಮುಸ್ಲಿಂ ಮಹಿಳೆಯೊಬ್ಬರನ್ನು ಕಡಬ ಠಾಣಾ ವ್ಯಾಪ್ತಿಯ ನೆಟ್ಟಣ ಎಂಬಲ್ಲಿ ಪತ್ತೆ ಹಚ್ಚಿ ವಾಪಸ್ಸು ಮಡಿಕೇರಿಗೆ ಕಡೆದುಕೊಂಡು ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.

ಮಹಿಳೆಯ ಪತಿಯ ದೂರಿನ ಅನ್ವಯ ಮಡಿಕೇರಿಯ ಠಾಣೆಯಲ್ಲಿ ದಾಖಲಾಗಿದ್ದ ದೂರು ಮಹಿಳೆ ಮರಳಿ ಸಿಗುವುದರೊಂದಿಗೆ ಸುಖಾಂತ್ಯ ಕಂಡಿದೆ.

ಘಟನೆ ವಿವರ: ಮಡಿಕೇರಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಯುವಕನನ್ನು ಮದುವೆಯಾಗಿದ್ದು, ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದರು. ಹೀಗೆ ನಾಪತ್ತೆಯಾದ ಮಹಿಳೆ ದಕ್ಷಿಣ ಕನ್ನಡ ಸುಳ್ಯ ತಾಲೂಕಿಗೆ ಬಂದಿದ್ದು, ಅಲ್ಲಿಂದ ಕಡಬ ತಾಲೂಕಿನ ನೆಟ್ಟಣದ ಮುಸ್ಲಿಂ ಸಮುದಾಯವೊಂದು ಮನೆ ಕೆಲಸಕ್ಕಾಗಿ ಕರೆತಂದಿದ್ದರು.

ಮಹಿಳೆ ನಾಪತ್ತೆಯಾದ ಬಗ್ಗೆ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ತನಿಖೆ ಕೈಗೊಂಡಿದ್ದು, ಮಹಿಳೆ ಕಡಬ ಠಾಣಾ ವ್ಯಾಪ್ತಿಯಲ್ಲಿರುವುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಡಬ ಪೇಟೆಗೆ ಬರುತ್ತಿದ್ದ ವೇಳೆ ಐತ್ತೂರು ಗ್ರಾಮ ಪಂಚಾಯತ್ ಬಳಿ ಆಟೋ ರಿಕ್ಷಾದಿಂದ ವಶಕ್ಕೆ ಪಡೆದು ಮಡಿಕೇರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment