Home » Kadaba:ಕಡಬದ ಕುಟ್ರುಪ್ಪಾಡಿಯಲ್ಲಿ ಕಾಡಾನೆ ದಾಳಿ : ಇಬ್ಬರು ಸಾವು

Kadaba:ಕಡಬದ ಕುಟ್ರುಪ್ಪಾಡಿಯಲ್ಲಿ ಕಾಡಾನೆ ದಾಳಿ : ಇಬ್ಬರು ಸಾವು

by Mallika
0 comments
Elephant

Kadaba: ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ಮುಂಜಾನೆ ಆನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಸೊಸೈಟಿ ಗೆ ಮನೆಯಿಂದ ಹೋಗುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ನಡೆಸಿದೆ.

ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೆ ಆನೆ ಅಟ್ಟಹಾಸ ಮೆರೆದಿದೆ. ರಮೇಶ್ ರೈ ಸ್ಥಳದಲ್ಲಿ ಮೃತಪಟ್ಟರೆ ರಂಜಿತ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ..

You may also like

Leave a Comment