Home » ಕಡಬ: ಮಹಿಳೆಯನ್ನು ಬೆನ್ನಟ್ಟುತ್ತಿರುವ ದುಷ್ಕರ್ಮಿಗಳ ತಂಡ!! ಠಾಣೆಯಲ್ಲಿ ದೂರು ದಾಖಲು-ಸಂಚಿನ ಹಿಂದಿನ ಕೈ ಯಾವುದು!??

ಕಡಬ: ಮಹಿಳೆಯನ್ನು ಬೆನ್ನಟ್ಟುತ್ತಿರುವ ದುಷ್ಕರ್ಮಿಗಳ ತಂಡ!! ಠಾಣೆಯಲ್ಲಿ ದೂರು ದಾಖಲು-ಸಂಚಿನ ಹಿಂದಿನ ಕೈ ಯಾವುದು!??

0 comments

ಕಡಬ: ಇಲ್ಲಿನ ಕುಂತೂರು-ಪದವು ಬಳಿಯ ಮುರಚೆಡವು ಎಂಬಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಬೆನ್ನಟ್ಟಿದ್ದಲ್ಲದೇ, ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಹತ್ತು ದಿನಗಳಿಂದ ದುಷ್ಕರ್ಮಿಗಳ ತಂಡವೊಂದು ಮಹಿಳೆಯ ಮೇಲೆ ಹಲ್ಲೆ ಹಾಗೂ ಯಾವುದೋ ದುಷ್ಕೃತ್ಯ ನಡೆಸಲು ಹೊಂಚು ಹಾಕಿದಲ್ಲದೇ ಸಂಚು ನಡೆಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈಗಾಗಲೇ ಒಂದು ಬಾರಿ ಮಹಿಳೆ ಪ್ರಾಣ ರಕ್ಷಣೆಗಾಗಿ ಓಡಿದ ಪ್ರಸಂಗವೂ ನಡೆದಿತ್ತು.

ಸದ್ಯ ಮಹಿಳೆ ಪ್ರಾಣ ರಕ್ಷಣೆ ಕೋರಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

You may also like

Leave a Comment