Kadaba : ಕಾರೊಂದು ಬೈಕ್‌ಗೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಉಪ್ಪಿನಂಗಡಿ-ಕಡಬ(Kadaba) ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಆ.೧೫ರಂದು ಬೆಳಿಗ್ಗೆ ೯.೧೫ರ ವೇಳೆಗೆ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದಾರೆ.
ಆಲಂಕಾರು ಗ್ರಾಮದ ಕಕ್ವೆ ನಿವಾಸಿ ಸುಧಾಕರ ಗಾಯಗೊಂಡವರು. ಸುಧಾಕರ ಅವರು ಮನೆಯಿಂದ ಉಪ್ಪಿನಂಗಡಿಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆತೂರು ಅಶ್ವಿನಿ ಆಸ್ಪತ್ರೆ ಮುಂಭಾಗ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಬೈಕ್ ಪಲ್ಟಿಯಾಗಿ ಸವಾರ ಸುಧಾಕರ ಅವರು ಕೆಳಕ್ಕೆ ಎಸೆಯಲ್ಪಟ್ಟಿದ್ದು ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಉಪಚರಿಸಿ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಬೈಕ್‌ಗೆ ಕಾರು ಡಿಕ್ಕಿಯಾದರೂ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾರೆ.
ಘಟನೆ ಕುರಿತಂತೆ ಬೈಕ್ ಸವಾರ ಸುಧಾಕರ ಅವರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಾರಿಯಾದ ಕಾರಿನ ಗುರುತು ಪತ್ತೆಗಾಗಿ ಸ್ಥಳೀಯ ಅಂಗಡಿಯಲ್ಲಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗಿದೆ.
ಇದನ್ನೂ ಓದಿ: ‘ ಮುಸ್ಲಿಮರ ಓಟು ನಮಗೆ ಬೇಡ ಬರ್ತಿದ್ದ ಮುಸ್ಲಿಮರ 30 % ಓಟುಗಳೂ ಕೆಲವರ ಮಾತಿನ ತೆವಲಿಗೆ ತೇಲಿ ಹೋದ್ವು’: ಛಲವಾದಿ ಹೇಳಿಕೆ
