Home » ಕಡಬ : ಆಸಿಡ್ ಸೇವಿಸಿ ರಬ್ಬರ್ ಟ್ಯಾಪರ್ ಆತ್ಮಹತ್ಯೆ

ಕಡಬ : ಆಸಿಡ್ ಸೇವಿಸಿ ರಬ್ಬರ್ ಟ್ಯಾಪರ್ ಆತ್ಮಹತ್ಯೆ

by Praveen Chennavara
0 comments

ಕಡಬ: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದ ಕೇರಳದ ಶ್ರೀಧರನ್ ಕಾಣಿ (55ವ) ಎಂಬವರು ಆಸಿಡ್ ಸೇವಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಕುದ್ಮಾರಿನ ಹತ್ತನೆಕಲ್ಲು ಎಂಬಲ್ಲಿ ನಾರ್ಣಪ್ಪ ಗೌಡ ಎಂಬವರ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕೇರಳದ ಮೂಲದ ಶ್ರೀಧರನ್ ಕಾಣಿ ಎಂಬವರು ರಬ್ಬರ್ ಶೀಟ್ ಮಾಡಲು ಉಪಯೋಗಿಸುವ ಆಸಿಡ್‌ನ್ನು ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾಗ ಶ್ರೀಧರನ್ ಜೊತೆಗಿದ್ದ ರೆಝಿ ಆರ್ ಸೋಮರಾಜ್ ಸ್ಥಳೀಯರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಾಯದಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಮಗ ಶ್ರೀಜಿತ್ ನೀಡಿದ ದೂರಿನಂತೆ ಬೆಳ್ಳಾರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment