4
Kokkada accident: ಬೆಳ್ತಂಗಡಿ : ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸೇತುವೆ ಸಮೀಪ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಗೋಳಿತೊಟ್ಟು ಪೆರಣ ನಿವಾಸಿ ಅಶೋಕ್ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೇ.18ರಂದು ಈ ಘಟನೆ ನಡೆದಿದ್ದು ,ಅಶೋಕ್ ಅವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಬೈಕ್ ಸವಾರ ಅಶೋಕ್ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿದ್ದು, ಕರ್ತವ್ಯ ಮುಗಿಸಿ ಧರ್ಮಸ್ಥಳದಿಂದ ಉಪ್ಪಾರಪಳಿಕೆ ಮಾರ್ಗವಾಗಿ ಪೆರಣದ ಮನೆಗೆ ಹೋಗುತ್ತಿದ್ದ ಸಂದರ್ಭ ಉಪ್ಪಿನಂಗಡಿಯಿಂದ ಉಪ್ಪಾರಪಳಿಕೆಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿ ಮೂಲದ ಉದ್ಯಮಿಯೊಬ್ಬರ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಹಾಗೂ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿತ್ತು.
