Home » ಕೊಳ್ತಿಗೆ : ಹೆಬ್ಬಾವು ಕೊಂದು ಅರಣ್ಯ ಇಲಾಖೆಯ ಕಟ್ಟಡಕ್ಕೆ ನೇತು ಹಾಕಿದರು | ಗ್ರಾ.ಪಂ.ಸಿಬ್ಬಂದಿ ಸಹಿತ ಇಬ್ಬರ ಬಂಧನ

ಕೊಳ್ತಿಗೆ : ಹೆಬ್ಬಾವು ಕೊಂದು ಅರಣ್ಯ ಇಲಾಖೆಯ ಕಟ್ಟಡಕ್ಕೆ ನೇತು ಹಾಕಿದರು | ಗ್ರಾ.ಪಂ.ಸಿಬ್ಬಂದಿ ಸಹಿತ ಇಬ್ಬರ ಬಂಧನ

by Praveen Chennavara
0 comments

ಪುತ್ತೂರು : ಹೆಬ್ಬಾವನ್ನು ಕೊಂದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ ಆರೋಪದಡಿ ಕೊಳ್ತಿಗೆ ಗ್ರಾ. ಪಂ. ಸಿಬ್ಬಂದಿ ಸಹಿತ ಇಬ್ಬರನ್ನು ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.

ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ (38 ವರ್ಷ) ಮತ್ತು ಕೊಳ್ತಿಗೆ ಗ್ರಾ. ಪಂ ಸಿಬ್ಬಂದಿ ಜಯ(38 ವರ್ಷ) ಬಂಧಿತ ಆರೋಪಿಗಳು.

ಅರಣ್ಯ ಇಲಾಖೆ ಅಧಿಕಾರಿ ಗಳು ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಇವರಿಗೆ ಜುಲೈ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಆರೋಪಿಗಳು ಹಿಡಿದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲ ಬೀಗಕ್ಕೆ ಕಟ್ಟಿದ್ದು ಇದರಿಂದ ಹಾವು ಮೃತಪಟ್ಟಿದೆ.

You may also like

Leave a Comment