Home » ಧರ್ಮಸ್ಥಳ:ರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ;ಮೂವರು ಆರೋಪಿಗಳ ಬಂಧನ

ಧರ್ಮಸ್ಥಳ:ರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ;ಮೂವರು ಆರೋಪಿಗಳ ಬಂಧನ

0 comments

 

Dharmasthala:ಕಳೆದ ಒಂದೆರಡು ದಿನಗಳ ಹಿಂದೆ ಇಲ್ಲಿನ ಬಸ್ ನಿಲ್ದಾಣದ ಬಳಿ ಪ್ರಯಾಣಿಕ ಯುವತಿಯೋರ್ವಳನ್ನು ಕರೆದುಕೊಂಡು ಬಂದಿದ್ದ ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಧರ್ಮಸ್ಥಳ(Dharmasthala) ನಿವಾಸಿ ಅವಿನಾಶ್(26), ನಂದೀಪ್(20) ಹಾಗೂ ಉಪ್ಪಿನಂಗಡಿ ನಿವಾಸಿ ಅಕ್ಷತ್ (22) ಎಂದು ಗುರುತಿಸಲಾಗಿದ್ದು,ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ವಿವರ:ಕಳೆದ ಬುಧವಾರ ಇಲ್ಲಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಬೆಂಗಳೂರು ಮೂಲದ ಹಿಂದೂ ವಿದ್ಯಾರ್ಥಿನಿಯೋರ್ವಳು ಉಜಿರೆಯಿಂದ ಆಟೋ ಹತ್ತಿ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು. ಈ ವೇಳೆ ಅಲ್ಲಿದ್ದ ಕೆಲ ಯುವಕರು ಆಟೋ ಚಾಲಕ ಮುಸ್ಲಿಂ ಯುವಕ ಎನ್ನುವ ಕ್ಯಾತೆ ತೆಗೆದಿದ್ದು, ವಿಚಾರ ಸುದ್ದಿಯಾಗಿದೆ ಎನ್ನಲಾಗಿದೆ.

ಬಳಿಕ ಯುವಕರ ತಂಡವು ಬಸ್ ನಿಲ್ದಾಣದ ಬಳಿ ಆಟೋ ಚಾಲಕನನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದು, ಗಾಯಗೊಂಡ ಆಟೋ ಚಾಲಕ ಆಸ್ಪತ್ರೆಗೆ ದಾಖಲಾಗಿ ಠಾಣೆಗೆ ದೂರು ನೀಡಿದ್ದ. ಆತನ ದೂರಿನ ಆಧಾರದಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಹೋರಾಟದ ಪರ ನಿಂತ ಕಾಂಗ್ರೆಸ್, ಟ್ವೀಟ್ ಮಾಡಿ ರಕ್ಷಣೆ ನೀಡುವುದಾಗಿ ಘೋಷಣೆ !

You may also like