Dharmasthala Sowjanya case: ಸೌಜನ್ಯ ಪರ ಹೋರಾಟಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ, ಖುದ್ದು ಕರ್ನಾಟಕದ ಕಾಂಗ್ರೆಸ್ ಸೌಜನ್ಯ ಪರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದು, ಈ ಕೆಳಗಿನಂತೆ ಘೋಷಣೆ ಮಾಡಿದೆ. ಈ ಮೂಲಕ ಟ್ರೀಟ್ ಮಾಡಿ ಧರ್ಮ ರಕ್ಷಣೆಗೆ ನಿಲ್ಲುವುದಾಗಿ ಘೋಷಿಸಿದೆ ಕರ್ನಾಟಕ ಕಾಂಗ್ರೆಸ್.
ಇದನ್ನೂ ಓದಿ: Chetan Ahimsa: ಸೌಜನ್ಯ ಸಪೋರ್ಟ್ ಗೆ 3 ನೇ ನಟ ; ಧರ್ಮಸ್ಥಳದ ಶಕ್ತಿಗಳು ಮೌನ ಆಗಿರೋದ್ಯಾಕೆ ಎಂದು ಪ್ರಶ್ನಿಸಿದ ಚೇತನ್ !
ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ !!!
ಸೌಜನ್ಯ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ, ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದೆ ರಾಜ್ಯ ಕಾಂಗ್ರೆಸ್. ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ. ಧರ್ಮಸ್ಥಳದ ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಶುಕ್ರವಾರ ಉಜಿರೆಯಲ್ಲಿ ನಡೆದ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಪ್ರತಿಭಟನೆ ವೇಳೆ ಸೌಜನ್ಯಾ ಕುಟುಂಬದ ಮೇಲೆ ಹಲ್ಲೆ ಯತ್ನವನ್ನು ಉಲ್ಲೇಖಿಸಿ ಕಾಂಗ್ರೆಸ್ ಹೀಗೆ ಹೇಳಿದೆ.
ಈ ಬಗ್ಗೆ ‘ಎಕ್ಸ್’ ಅಂದರೆ ಟ್ವೀಟ್ ಮಾಡಿ ಬರೆದುಕೊಂಡಿರುವ ಕಾಂಗ್ರೆಸ್,
” ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ.. ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಹೇಳಿದೆ. ಅಲ್ಲದೆ, ‘ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯಾ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ’ ಎಂದು ಹೇಳಿದೆ.
ಇದನ್ನೂ ಓದಿ : ಸೌಜನ್ಯಾ ತಾಯಿ ಮತ್ತು ಸಹೋದರನ ಮೇಲೆ ಹಲ್ಲೆ ಮತ್ತು ಬೆದರಿಕೆ| ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು !
ನಡೆದ ಘಟನೆಯ ಹಿನ್ನೆಲೆ:
2012ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಾ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದವರ ಮೇಲೆ ಮತ್ತು ಆಪ್ತರ ಮೇಲೆ ಅನುಮಾನ ಮೂಡಿತ್ತು. ಆನಂತರ ಸಿಐಡಿ ತನಿಖೆ ಸಿಬಿಐ ತನಿಖೆ ನಡೆದು ಇದೀಗ ಘಟನೆ ನಡೆದು 11 ವರ್ಷಗಳೆ ಕಳೆದು ಹೋಗಿವೆ. ಅನಂತರ ಇದ್ದ ಆರೋಪಿಯನ್ನು ಇತ್ತೀಚೆಗೆ ಸಿಬಿಐ ನ್ಯಾಯಾಲಯವು ತದನಂತರ ಸೌಜನ್ಯ ಹತ್ಯೆಗೆ ನ್ಯಾಯ ಕೊಡಲು ಹೋರಾಟ ಶುರುವಾಗಿತ್ತು.
ಇದನ್ನೂ ಓದಿ: ಸೌಜನ್ಯ ಪ್ರಕರಣ: ಹೊರಜಿಲ್ಲೆಯ ಸಂಘಟನೆ ಸೌಜನ್ಯ ಹೋರಾಟಕ್ಕೆ ಬರೋದು ಬೇಡ್ವಂತೆ; ಶಾಕಿಂಗ್ ಹೇಳಿಕೆ ನೀಡಿದ ಬಿಜೆಪಿ ಮುಖಂಡ !
ಈ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರ ಮತ್ತು ಕ್ಷೇತ್ರದ ಬಗ್ಗೆ ಕೆಲವರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಇದನ್ನು ಖಂಡಿಸಿ ಶುಕ್ರವಾರ ಉಜಿರೆಯಲ್ಲಿ ʼಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ನೇತೃತ್ವದಲ್ಲಿ ಸಮಾವೇಶ, ಜಾಥಾ ಮತ್ತು ಹಕ್ಕೊತ್ತಾಯ ಕಾರ್ಯಕ್ರಮ ನಡೆದಿತ್ತು. ಆ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರ ಮಗಳು ಮತ್ತು ಮಗ ವೇದಿಕೆ ಹತ್ತಲು ಪ್ರಯತ್ನಿಸಿ ತಮ್ಮ ಮಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ಕೋರಲು ಬಂದಿದ್ದರು. ಆ ಸಂದರ್ಭದಲ್ಲಿ ಒಬ್ಬ ಅವರ ಮೇಲೆ ಹಲ್ಲಿಗೆ ಯತ್ನಿಸಿದ್ದ. ತದನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸೌಜನ್ಯ ಕುಟುಂಬಕ್ಕೆ ರಕ್ಷಣೆ ನೀಡಬೇಕೆನ್ನುವ ಒತ್ತಾಯ ಕೇಳಿ ಬಂದಿತ್ತು. ಇದೀಗ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರ್ಕಾರ ಖುದ್ದು ರಕ್ಷಣೆ ನೀಡುವ ಭರವಸೆ ನೀಡಿದೆ.
ಧರ್ಮಸ್ಥಳದ ಸೌಜನ್ಯ ಕುಟುಂಬ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧ, ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದಿದೆ ಕಾಂಗ್ರೆಸ್. ಇದೀಗ ಈ ಘಟನೆಯು ಸೌಜನ್ಯ ಪರ ಹೋರಾಟಕ್ಕೆ ಭಾರಿ ನೈತಿಕ ಬೆಂಬಲ ಸಿಕ್ಕಿದ್ದು, ಇದು ರಾಜ್ಯವ್ಯಾಪಿ ಹೋರಾಟಕ್ಕೆ ಮುನ್ನುಡಿ ಬರೆಯಲಿದೆ.
ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ..
ಸೌಜನ್ಯ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ, ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯ ಕುಟುಂಬಕ್ಕೆ ಸೂಕ್ತ ರಕ್ಷಣೆ… pic.twitter.com/uppxGZvElT
— Karnataka Congress (@INCKarnataka) August 4, 2023
