Home » Karkala Theme Park: ಕಾರ್ಕಳ ಪರಶುರಾಮ ಥೀಂ ಪಾರ್ಕ್‌ ಭೇಟಿ ನಿಷೇಧ!

Karkala Theme Park: ಕಾರ್ಕಳ ಪರಶುರಾಮ ಥೀಂ ಪಾರ್ಕ್‌ ಭೇಟಿ ನಿಷೇಧ!

0 comments
Karkala theme park

Karkala Theme Park: ಕರಾವಳಿ ಜಿಲ್ಲೆಯಲ್ಲಿ ಹಲವಾರು ಪ್ರವಾಸ ತಾಣಗಳಿವೆ. ಸದ್ಯ ಕರಾವಳಿ ಕಡೆ ಪ್ರವಾಸ ಬರುವವರ ಗಮನಕ್ಕೆ ಒಂದು ಮುಖ್ಯ ಮಾಹಿತಿ ಇಲ್ಲಿ ತಿಳಿಸಲಾಗಿದೆ. ಉಡುಪಿ ಜಿಲ್ಲೆಯ ಅತೀ ಎತ್ತರದ ಪರಶುರಾಮನ ಮೂರ್ತಿ ಇರುವ ಥೀಂ ಪಾರ್ಕ್‌ (karkala Theme Park) ಗೆ ಜೂನ್‌ 26 ರಿಂದ ಸೆಪ್ಟಂಬರ್‌ ಅಂತ್ಯದವರೆಗೆ ತಾತ್ಕಾಲಿಕವಾಗಿ ಸಾರ್ವಜನಿಕ ಭೇಟಿಯನ್ನು ನಿಷೇಧಿಸಲಾಗಿದೆ.

ಹೌದು,ಇದೇ ವರುಷದ ಜನವರಿ 27 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿರುವ, 100 ಅಡಿ ಎತ್ತರದ ಕುಂಜ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್‌ ನ್ನು ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಯಲು ರಂಗ ಮಂದಿರ, ಆಡಿಯೋ ವಿಶ್ವಲ್ಸ್‌ ಕೊಠಡಿ, ಗ್ಯಾಲರಿಗಳನ್ನು ಹೊಂದಿವೆ. ಸದ್ಯ 33 ಅಡಿ ಎತ್ತರದ ಪರಶುರಾಮ ಮೂರ್ತಿ ಜನರ ಆಕರ್ಷಣೆ ಪಡೆದಿದೆ.

ಇದೀಗ ಕಾರ್ಕಳ (Karkala) ಪರಶುರಾಮ (Parashurama) ಥೀಂ ಪಾರ್ಕ್‌ ಜೂನ್‌ 26 ರ ಸೋಮವಾರದಿಂದ ಸಾರ್ವಜನಿಕರ ಭೇಟಿ ನಿಷೇಧ ವಿಧಿಸಿ ಕಾರ್ಕಳ ತಾಲೂಕು ತಹಶೀಲ್ದಾರ್‌ ಆದೇಶ ನೀಡಿದ್ದಾರೆ.

ಯರ್ಲಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಬರುವ ಪರಶುರಾಂ ಥೀಮ್‌ ಪಾರ್ಕ್‌ 100 ಅಡಿ ಎತ್ತರದ ಕುಂಜ ಬೆಟ್ಟದಲ್ಲಿದೆ. ಆದರೆ, ಥೀಂ ಪಾರ್ಕ್‌ ನ ಕೆಲವೊಂದು ಅಂತಿಮ ಹಂತದ ಕೆಲಸ ಕಾರ್ಯಗಳು ಬಾಕಿಯಾಗಿದ್ದು ಈ ನಿಟ್ಟಿನಲ್ಲಿ ಪಾರ್ಕ್‌ ಭೇಟಿಗೆ ನಿಷೇಧ ವಿಧಿಸಲಾಗಿದೆ.

ವಿಶೇಷವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಪರಶುರಾಮ ಮೂರ್ತಿಯನ್ನು ಬಲಪಡಿಸುವ ಹಾಗೂ ಮೂರ್ತಿಗೆ ಸಿಡಿಲು ನಿರೋಧಕ ಮತ್ತು ತುಕ್ಕು ನಿರೋಧಕ ಲೇಪನ ಸೇರಿದಂತೆ ಮುಕ್ತಾಯ ಹಂತದ ಕೆಲಸ ಕಾರ್ಯಗಳು ಬಾಕಿಯಾಗಿವೆ. ಈ ಎಲ್ಲಾ ಕಾರಣದಿಂದ ಸೆಪ್ಟಂಬರ್‌ ಅಂತ್ಯದವರೆಗೆ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: KARBWWB Recruitment 2023: ಕರ್ನಾಟಕ ಬಿಲ್ಡಿಂಗ್ ಅಂಡ್ ಅದರ್ ಕಂಸ್ಟ್ರಕ್ಷನ್ ವರ್ಕರ್ ವೆಲ್‌ಫೇರ್ ಬೋರ್ಡ್‌ ನಲ್ಲಿ ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ!

You may also like

Leave a Comment