Home » ಮಂಗಳೂರು : ಸೋಮೇಶ್ವರ ಕಡಲಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ| ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ| ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು : ಸೋಮೇಶ್ವರ ಕಡಲಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ| ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ| ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0 comments

ಉಳ್ಳಾಲ : ಯುವಕನೋರ್ವ ಸೋಮೇಶ್ವರ ಕಡಲಿಗೆ ಜಿಗಿದು‌ ಆತ್ಮಹತ್ಯೆಗೈದ ಘಟನೆ‌ ಇಂದು ನಡೆದಿದೆ.

ಉಚ್ಚಿಲ ಸಂಕೊಳಿಗೆ ನಿವಾಸಿ ಭಾಸ್ಕರ್ ನಾಯಕ್ ( 32) ಎಂಬುವವರು ಮೃತ ವ್ಯಕ್ತಿ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗೆಟ್ ಅಪ್ ಸಾಫ್ಟ್ ಡ್ರಿಂಕ್ಸ್ ಸಂಸ್ಥೆಯಲ್ಲಿ ವಾಹನ ಚಾಲಕರಾಗಿದ್ದ ಭಾಸ್ಕರ್ ಅವರು ಶನಿವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದರು. ಚಿನ್ನ ಬಿಡಿಸಲು ಭಾಸ್ಕರನ ಅಣ್ಣ ರೂ.20,000/- ಕೊಟ್ಟಿದ್ದರಂತೆ. ಆದರೆ ರಾತ್ರಿಯಿಡೀ ಭಾಸ್ಕರ್ ಬರದೇ ಇದ್ದದ್ದನ್ನು ನೋಡಿ ಮನೆಮಂದಿ ಗಾಬರಿಗೊಂಡಿದ್ದಾರೆ. ಹಾಗಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಹಣ ಇಂದು ಬೆಳಿಗ್ಗೆ ಮಂಚದ ದಿಂಬಿನ ಅಡಿಯಲ್ಲಿ ಇತ್ತು.

ಸೋಮೇಶ್ವರ ರುದ್ರಪಾದೆಯ ಕಡಲ ತೀರದಲ್ಲಿ ಭಾಸ್ಕರ್ ಮೃತದೇಹ ಇಂದು ಸಂಜೆ ತೇಲುತ್ತಿದ್ದು ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿಗಳಾದ ಅಶೋಕ್ ಸೋಮೇಶ್ವರ, ಕಿರಣ್ ಆಂಟನಿ ಅವರು ಮೃತದೇಹವನ್ನು ತೀರಕ್ಕೆ ತಂದಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭಾಸ್ಕರ್ ಅಣ್ಣ , ತಾಯಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಮಾನಸಿಕವಾಗಿ ಖಿನ್ನನಾಗಿದ್ದನಂತೆ ಕೆಲವು ದಿನಗಳ ಹಿಂದೆ. ಇವರು ಅವಿವಾಹಿತರಾಗಿದ್ದರು.

You may also like

Leave a Comment