Home » ಮಂಗಳೂರು ಮಹಾನಗರ ಪಾಲಿಕೆ : ಇಂದು ಮೇಯರ್ ,ಉಪ ಮೇಯರ್ ಆಯ್ಕೆಗೆ ಚುನಾವಣೆ

ಮಂಗಳೂರು ಮಹಾನಗರ ಪಾಲಿಕೆ : ಇಂದು ಮೇಯರ್ ,ಉಪ ಮೇಯರ್ ಆಯ್ಕೆಗೆ ಚುನಾವಣೆ

by Praveen Chennavara
0 comments

ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಮೂರನೇ ಅವಧಿಯ ಮೇಯರ್‌, ಉಪಮೇಯರ್‌ ಹಾಗೂ ನಾಲ್ಕು ಸ್ಥಾಯೀ ಸಮಿತಿ ಸದಸ್ಯರ ಚುನಾವಣೆ ಶುಕ್ರವಾರ ನಡೆಯಲಿದೆ.

ಅಪರಾಹ್ನ 12 ಗಂಟೆಗೆ ಮತದಾನ ನಿಗದಿಯಾಗಿದ್ದು, ಚುನಾವಣೆ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಮೇಯರ್‌ ಸ್ಥಾನ “ಸಾಮಾನ್ಯ’ ಹಾಗೂ ಉಪ ಮೇಯರ್‌ ಸ್ಥಾನವು “ಹಿಂದುಳಿದ ವರ್ಗ ಮಹಿಳೆ’ ಮೀಸಲಾತಿಗೆ ನಿಗದಿಯಾಗಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮತದಾನ ನಡೆಯಲಿದೆ.

ಕೊನೆಯ ಹಂತದ ಬದಲಾವಣೆ ಹೊರತುಪಡಿಸಿದರೆ ಬಿಜೆಪಿಯ ಹಿರಿಯ ಸದಸ್ಯ ಜಯಾನಂದ ಅಂಚನ್‌ ಮೇಯರ್‌ ಹುದ್ದೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

You may also like

Leave a Comment