Home » ಮಂಗಳೂರು:ನಗರದ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ!! ಸಿಸಿಬಿ ಪೊಲೀಸರಿಂದ ಮನೆಯೊಂದಕ್ಕೆ ದಾಳಿ-ಮಾಲು ಸಹಿತ ದಂಪತಿಗಳು ವಶಕ್ಕೆ!!

ಮಂಗಳೂರು:ನಗರದ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ!! ಸಿಸಿಬಿ ಪೊಲೀಸರಿಂದ ಮನೆಯೊಂದಕ್ಕೆ ದಾಳಿ-ಮಾಲು ಸಹಿತ ದಂಪತಿಗಳು ವಶಕ್ಕೆ!!

0 comments

ಮಂಗಳೂರು: ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಪಿಎಸ್ಐ ರಾಜೇಂದ್ರ ಬಿ ನೇತೃತ್ವದ ತಂಡ ದಾಳಿ ನಡೆಸಿ ದಂಪತಿಗಳನ್ನು ವಶಕ್ಕೆ ಪಡೆದ ಘಟನೆಯೊಂದು ನಗರದ ಹೊರವಲಯದ ಕಾವೂರು ಬಳಿ ನಡೆದಿದೆ.

ಆರೋಪಿಗಳನ್ನು ವಿಖ್ಯಾತ್ ಅಲಿಯಾಸ್ ವಿಕ್ಕಿ ಬಪ್ಪಾಲ್ (28) ಹಾಗೂ ಆತನ ಪತ್ನಿ ಅಂಜನಾ(21) ಎಂದು ಗುರುತಿಸಲಾಗಿದೆ.ದಂಪತಿಗಳು ಕಾವೂರು ಶಂಕರ ನಗರ ಕೆ.ಸಿ ಆಳ್ವ ಲೇ ಔಟ್ ನಿವಾಸಿಗಳಾಗಿದ್ದು,ನಗರದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗಾಂಜಾ ಪೂರೈಕೆ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮನೆಗೆ ದಾಳಿ ನಡೆಸಿದ್ದು,ಮನೆಯಲ್ಲಿ ದಾಸ್ತಾನಿರಿಸಲಾಗಿದ್ದ ಗಾಂಜಾ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment