Home » Mangaluru: ನಾಗರಾಧಕರಿಗೆ ಕೇದಗೆ ಬದಲಿಗೆ ಮುಂಡೇವು ಮಾರಾಟ! ಸಾವಿರಾರು ರೂಪಾಯಿ ಮೋಸ!

Mangaluru: ನಾಗರಾಧಕರಿಗೆ ಕೇದಗೆ ಬದಲಿಗೆ ಮುಂಡೇವು ಮಾರಾಟ! ಸಾವಿರಾರು ರೂಪಾಯಿ ಮೋಸ!

0 comments
Mangaluru

Mangaluru : ಜನರನ್ನು ವಂಚಿಸಲು ನಾನಾ ಮಾರ್ಗಗಳನ್ನು ಹಿಡಿಯುವುದು ಮಾಮೂಲಿ. ಹಿಂದೂ ಧರ್ಮದಲ್ಲಿ(Hindu) ಹಬ್ಬ ಹರಿದಿನಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ.ಅದರಲ್ಲಿಯೂ ಕರಾವಳಿ ಭಾಗದಲ್ಲಿ ತುಳುನಾಡಿನ(Mangaluru) ಜನರು ನಾಗನ ಆರಾಧನೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹಬ್ಬದ( Festival)ಸಂದರ್ಭದಲ್ಲಿ ಆ ಹಬ್ಬಕ್ಕೆ ಅನುಗುಣವಾಗಿ ದೇವರಿಗೆ ಇಷ್ಟವಾದ ಹೂವು, ಹಣ್ಣು ಫಲಗಳನ್ನು ಆರಾಧನೆಗೆ ಬಳಕೆ ಮಾಡುವುದು ವಾಡಿಕೆ.

ಅದೇ ರೀತಿ ವರ್ಷದ ಪರ್ವ ನಾಗರಪಂಚಮಿಯಂದು ನಾಗನಿಗೆ ಇಷ್ಟವಾಗುವ ಕೇದಗೆ ಮತ್ತು ಸಂಪಿಗೆಯನ್ನು ಆರಾಧನೆಗೆ ಹೆಚ್ಚಿನವರು ದೇವರಿಗೆ ಇಡಲು ಕೊಂಡುಕೊಳ್ಳುವುದು ವಾಡಿಕೆ.ಆದರೆ, ಜನರ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ಕೆಲವು ಕಿಡಿಗೇಡಿ ಮಾರಾಟಗಾರರು ಕೇದಗೆಯ ಬದಲಿಗೆ ಅದೇ ರೀತಿ ಹೋಲುವ ಕೊಳಚೆ ನೀರು ಹರಿಯುವ ಜಾಗದಲ್ಲಿ ಬೆಳೆಯುವ ಮುಂಡೇವು ಎಲೆಯನ್ನು ಕಟ್ಟು ಮಾಡಿ ರೂ. 300ಕ್ಕೆ ಮಾರಿ ಜನರನ್ನು ವಂಚಿಸಿದ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಸಂಚಲನ ಸೃಷ್ಟಿ ಮಾಡಿದೆ.

ಕೇದಗೆ ಮತ್ತು ಸಂಪಿಗೆಯ ಸುವಾಸನೆ ನಾಗನಿಗೆ ಪ್ರಿಯವಾಗಿದ್ದು, ನಾಗರಪಂಚಮಿಯಂದು ಎಷ್ಟೇ ಕಷ್ಟವಾಗಿದ್ದರು ಕೂಡ ನಾಗನಿಗೆ ಅರ್ಪಿಸುವ ಸಲುವಾಗಿ ಹೆಚ್ಚು ಖರ್ಚು ಮಾಡಿ ಕೊಂಡುಕೊಳ್ಳುತ್ತಾರೆ. ಆದರೆ, ಇದನ್ನು ದುರುಪಯೋಗಪಡಿಸಿಕೊಂಡ ಕೆಲ ಮಾರಾಟಗಾರರು ಮಂಗಳೂರಿನ ಕಾರ್‌ ಸ್ಟ್ರೀಟ್‌ ನಲ್ಲಿ ಖರೀದಿ ಮಾಡಿದ್ದರೆನ್ನಲಾದ ಕೇದಗೆಯನ್ನು ನಾಗಸಾನಿಧ್ಯಕ್ಕೆ ಅಲಂಕಾರಕ್ಕೆ ತಂದಿದ್ದಾರೆ.

ಆದರೆ ಎಲೆಗಳನ್ನು ಸೂಕ್ಷ್ಮವಾಗಿ ನೋಡಿದ ಸಂದರ್ಭ ನಾಗಾರಾಧಕರೊಬ್ಬರು ಅದು ಮುಂಡೇವು ಗಿಡದ ಎಲೆ ಎಂಬುದನ್ನು ಖಾತ್ರಿ ಪಡಿಸಿದ್ದಾರೆ. ಮಂಗಳೂರಿನ ಕಾರ್‌ ಸ್ಟ್ರೀಟ್‌ ನಲ್ಲಿ ಇದೇ ಮುಂಡೇವು ಎಲೆಗಳನ್ನು ಮೂಟೆಗಟ್ಟಲೆ ಇಟ್ಟು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಮಾರಾಟಗಾರರು ಒಂದು ಕಟ್ಟಕ್ಕೆ ರೂ.300 ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಜನರನ್ನು ವಂಚಿಸಿ ಎರಡು ದಿನಗಳಲ್ಲಿ ಮಾರಾಟಗಾರರು ಸಾವಿರಾರು ರೂಪಾಯಿ ಸಂಗ್ರಹಣೆ ಮಾಡಿರುವ ಆರೋಪ ಕೇಳಿ ಬಂದಿದೆ.

ಇದಲ್ಲದೇ, ಕೇದಗೆ ಖರೀದಿಸುವವರು ಯಾರು ಕೂಡ ಇದನ್ನು ಗಮನಿಸದೆ ಮೋಸ ಹೋಗದಂತೆ ಸರಿಯಾಗಿ ಗಮನಿಸಿ ಖರೀದಿಸುವಂತೆ ಎಚ್ಚರ ವಹಿಸಲು ಕಿವಿ ಮಾತು ನೀಡಿದ್ದಾರೆ. ಕೇದಗೆ ಗಿಡಕ್ಕೆ ಕೈಹಾಕುವ ಸಂದರ್ಭ ಕೂಡ ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಂಡು ಕೀಳಬೇಕು. ಏಕೆಂದರೆ, ಎಲೆಗಳ ಸುವಾಸನೆಗೆ ನಾಗರಹಾವು ಅದರ ಪೊದೆಯಲ್ಲಿ ಇರುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ: Rakhi Sawant: ಬಾಲಿವುಡ್‌ ಡ್ರಾಮಾ ಕ್ವೀನ್‌ ರಾಖಿ ಸಾವಂತ್‌ ಎರಡನೇ ಗಂಡ ಆದಿಲ್‌ಖಾನ್‌ ದಿಢೀರ್‌ ಪ್ರತ್ಯಕ್ಷ!!!

You may also like