Home » Mangaluru: ಕಡಲ ತೀರದಲ್ಲಿ ಜೋಡಿ ಶವ ಪತ್ತೆ!

Mangaluru: ಕಡಲ ತೀರದಲ್ಲಿ ಜೋಡಿ ಶವ ಪತ್ತೆ!

1 comment
Mangaluru

Mangaluru: ಬೆಂಗಳೂರು ಮೂಲದ ಇಬ್ಬರು ಪಣಂಬೂರು ಕಡಲ ತೀರದಲ್ಲಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಗುರುವಾರ ಬೆಳಗ್ಗೆ ನಡೆದಿದೆ(Mangaluru news). ಮಧ್ಯವಯಸ್ಕ ವ್ಯಕ್ತಿ, ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದೆ. ಲಕ್ಷ್ಮಿ (43), ಬೋರಲಿಂಗಯ್ಯ (50) ಮೃತ ವ್ಯಕ್ತಿಗಳು.

ಮನೆಯಲ್ಲಿ ಹೇಳದೇ ಇವರಿಬ್ಬರು ಬೆಂಗಳೂರಿನಿಂದ ತೆರಳಿರುವುದಾಗಿ ಪ್ರಾಥಮಿಕ ಮಾಹಿತಿಯೊಂದು ಪೊಲೀಸರಿಗೆ ದೊರಕಿದೆ. ಇವರಿಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಪಣಂಬೂರು ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿದ್ದು, ಇವರಿಬ್ಬರ ಸಾವಿನ ಸುದ್ದಿ ಕೇಳಿ ಸಂಬಂಧಿಕರು ಮಂಗಳೂರಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ಶವಗಳನ್ನು ಮೇಲೆತ್ತಿದ್ದು, ಶವಾಗಾರದಲ್ಲಿ ಇಡಲಾಗಿದೆ.

ಇದನ್ನೂ ಓದಿ: Love Jihad: ಸುಲಭ್‌ ಶೌಚಾಲಯದಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಅಶ್ಲೀಲ ಕೃತ್ಯ!!! ಹೆಸರು ಮರೆಮಾಚಿ, ಪ್ರೀತಿ ಬಲೆಯಲ್ಲಿ ಬೀಳಿಸ್ತಿದ್ದ ಮುಸ್ಲಿಂ ಯುವಕ!!!

You may also like

Leave a Comment