7
ಮಂಗಳೂರಿನ ಕಾರ್ ಸ್ಟ್ರೀಟ್, ಹಂಪನಕಟ್ಟೆ, ಪಾಂಡೇಶ್ವರ, ಕುದ್ರೋಳಿ, ಕೊಟ್ಟಾರ , ಮಂದಾರಬೈಲ್, ಕೊಂಚಾಡಿ, ಕದ್ರಿ, ಬಿಜೈ ಮೊದಲಾದೆಡೆಗಳಲ್ಲಿ ಗ್ಯಾಸ್ ಲೀಕ್ ಆದ ವಾಸನೆ ಬಂದಿದ್ದು, ಜನರು ಒಂದು ಕ್ಷಣ ಆತಂಕಕ್ಕೆ ಒಳಗಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಗ್ಯಾಸ್ ಲೀಕ್ ಆದ ವಾಸನೆ ಈ ಪರಿಸರದಲ್ಲಿ ಹರಡಿದ್ದು, ಕೂಡಲೇ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿ ನಗರದ ಪ್ರಮುಖ ಗ್ಯಾಸ್ ಕಂಪನಿ, ಆಟೋ ಗ್ಯಾಸ್ ಪಂಪ್, ಹೈವೆಯಲ್ಲಿನ ಟ್ಯಾಂಕರ್ ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕೊನೆಗೆ ನಗರದಲ್ಲಿ ಎಲ್ಲೂ ಗ್ಯಾಸ್ ಲೀಕ್ ಆಗಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಜನರು ನೆಮ್ಮದಿಯಿಂದ ನಿಟ್ಟುಸಿರುಬಿಟ್ಟರು.
