Home » ಮೂಡುಬಿದಿರೆಯ ಜಿ.ಕೆ.ಎಂಟರ್‌ಪ್ರೈಸಸ್ ಮಾಲಕ ಗಣೇಶ್ ಕಾಮತ್ ಹೃದಯಾಘಾತದಿಂದ ನಿಧನ

ಮೂಡುಬಿದಿರೆಯ ಜಿ.ಕೆ.ಎಂಟರ್‌ಪ್ರೈಸಸ್ ಮಾಲಕ ಗಣೇಶ್ ಕಾಮತ್ ಹೃದಯಾಘಾತದಿಂದ ನಿಧನ

by Praveen Chennavara
0 comments
Ganesh kamath

Moodabidri: ಮೂಡುಬಿದಿರೆ : ಮೂಡುಬಿದಿರೆಯ (Moodabidri) ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ (45) ಅವರು ಮಾ. 3ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ವಿದ್ಯುತ್ ಅವಘಡದಿಂದ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಗಣೇಶ್‌ ಕಾಮತ್‌ ಅವರು ಜಿ.ಕೆ. ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದರು.

ಜಿ.ಕೆ. ಎಂಟರ್‌ ಪ್ರೈಸಸ್‌, ಜಿ.ಕೆ. ಗಾರ್ಡನ್‌, ಜಿ.ಕೆ. ಡೆಕೊರೇಟರ್‌ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿದ್ದ ಗಣೇಶ್‌ ಕಾಮತ್‌ ನೂರಾರು ಮಂದಿಗೆ ಉದ್ಯೋಗದಾತರಾಗಿದ್ದರು.

ಶುಕ್ರವಾರ ಬೆಳಗಿನ ವೇಳೆ ಮೂಡಬಿದ್ರೆಯ ತನ್ನ ಮನೆಯಿಂದ ಉದ್ಯಮ ಮಳಿಗೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತಕ್ಕೀಡಾದರು. ತಕ್ಷಣ ಅವರನ್ನು ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡರಾದರೂ ಜೀವ ಉಳಿಸಲಾಗಲಿಲ್ಲ.

ಮೃತರು ತಾಯಿ, ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

You may also like

Leave a Comment