8
Puttur: ಆರ್ಯಾಪು ಗ್ರಾಮದ ಸಂಪ್ಯ ಕಂಬಳತ್ತಡ್ಡ ನಾರಾಯಣ ಶೆಟ್ಟಿಯವರ ಪುತ್ರ ಸೀತಾರಾಮ ಶೆಟ್ಟಿ ಆ.23ರಂದು ಹೃದಯಾಘಾತದಿಂದ ನಿಧನರಾದರು.
ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿದ್ದ ಸೀತಾರಾಮ ಶೆಟ್ಟಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಸೀತಾರಾಮ ಶೆಟ್ಟಿ ಅವರು ನೈತ್ತಾಡಿಯ ಕಲ್ಲಗುಡ್ಡೆ (Puttur) ಎಂಬಲ್ಲಿ ಬಾರ್ & ರೆಸ್ಟೋರೆಂಟ್ ನ್ನು ನಿರ್ವಹಣೆ ಮಾಡುತ್ತಿದ್ದು, ಎಂದಿನಂತೆ ಆ.23 ಬಾರ್ & ರೆಸ್ಟೋರೆಂಟ್ ಗೆ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದೆ.
ಕೂಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಮೂಡಬಿದಿರೆಗೆ ನೂತನ ಇನ್ಸ್ ಪೆಕ್ಟರ್ ಆಗಿ ಸಂದೇಶ್
