Home » ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಗಾರ

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಗಾರ

by Praveen Chennavara
0 comments

ಪುತ್ತೂರು: ಸ್ಟಾಕ್ ಅಥವಾ ಷೇರು ಎನ್ನುವುದು ಸಂಸ್ಥೆಯೊಂದರ ಮಾಲೀಕತ್ವದಲ್ಲಿನ ಒಂದು ಪಾಲನ್ನು ಪ್ರತಿನಿಧಿಸುವ ಭದ್ರತಾ ಠೇವಣಿ ಆಗಿದೆ. ಹೂಡಿಕೆದಾರರಿಗೆ ತಮ್ಮ ಹೂಡಿಕೆಗಳನ್ನು ನೈಜ ಸಮಯದ ಆಧಾರದ ಮೇಲೆ ಖರೀದಿಸಲು, ಮಾರಾಟ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲುಷೇರು ಮಾರುಕಟ್ಟೆ ಅನುವು ಮಾಡಿಕೊಡುತ್ತದೆ ಎಂದು ಪುತ್ತೂರಿನ ಶ್ರೀರಾಮ್ ಷೇರಿನಆರ್ಥಿಕ ಸಲಹೆಗಾರ ಉಮೇಶ್ ನಾಯಕ್ ಹೇಳಿದರು.

ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ವಾಣಿಜ್ಯ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಷೇರು ಮಾರುಕಟ್ಟೆ ತುಂಬಾ ಪಾರದರ್ಶಕವಾಗಿದೆ. ಅಲ್ಲದೇ ಷೇರುಗಳ ಬೆಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅದಕ್ಕಾಗಿಯೇ ಇದನ್ನು ಲೈವ್ ಸ್ಟಾಕ್ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. ಭಾರತದ ಹಣಕಾಸು ಮಾರುಕಟ್ಟೆಗಳಲ್ಲಿ ಇಂದು ಹೂಡಿಕೆಯನ್ನು ಈಕ್ವಿಟಿ ಮಾರುಕಟ್ಟೆ, ಸರಕು ಮಾರುಕಟ್ಟೆಗಳು ಮತ್ತು ವಿದೇಶೀ ವಿನಿಮಯ ಕೇಂದ್ರಗಳಲ್ಲಿ ನಡೆಯಬಹುದು.ಮಾರುಕಟ್ಟೆಯಲ್ಲಿನ ಪೂರೈಕೆ ಮತ್ತು ಬೇಡಿಕೆಯ ಜತೆಗೆ ಇನ್ನೂ ಹಲವು ಅಂಶಗಳು ಷೇರುಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.ಇಂದು ಸ್ಟಾಕ್ ಮಾರುಕಟ್ಟೆಯಲ್ಲಿ ಹೆಚ್ಚಿನವರಿಗೆ ಹಣ ಸಂಪಾದಿಸುವುದರೊಂದಿಗೆ ಸಂಬಂಧ ಹೊಂದಿದೆ. ಆನ್‌ಲೈನ್‌ನಲ್ಲಿ ಅಥವಾ ಸ್ಟಾಕ್ ಎಕ್ಸ್ಚೇಂಜ್ ಮೂಲಕ ಹಣ ಸಂಪಾದಿಸುವುದು ಲಾಭದಾಯಕ ಸಂಗತಿಯಾಗಿದೆ, ಆದರೆ ಇದು ಅದರ ಅಪಾಯಗಳ ಗುಂಪಿನೊಂದಿಗೆ ಬರುತ್ತದೆ ಎಂದು ಹೇಳಿದರು.ಅಲ್ಲದೇ ವಿದ್ಯಾರ್ಥಿಗಳಿಗೆ ಕೆಲವು ಪ್ರಾತ್ಯಕ್ಷಿಕೆಯ ಮೂಲಕ ಮಾರುಕಟ್ಟೆ ವ್ಯವಹಾರಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ ಬ್ರೋಕರ್‌ಅನ್ನು ಪರಿಗಣಿಸುವಲ್ಲಿ ಸೇವೆ ಬಹಳ ಮುಖ್ಯವಾದ ಅಂಶವಾಗಿದೆ. ಪ್ರಶ್ನೆ ರೆಸಲ್ಯೂಶನ್, ಆರ್ಡರ್‌ ಇರಿಸುವಿಕೆ (ಖರೀದಿ ಅಥವಾ ಮಾರಾಟ), ಒಪ್ಪಂದದ ಟಿಪ್ಪಣಿಗಳು, ಬಂಡವಾಳ ಲಾಭದ ವರದಿಗಳು ಇತ್ಯಾದಿಗಳೆಲ್ಲವೂ ಹೂಡಿಕೆಯ ಪ್ರಮುಖ ಅಂಶಗಳಾಗಿವೆ. ಅಲ್ಲದೇ ವಿದ್ಯಾರ್ಥಿಗಳಿಗೆ ಇಂದಿನ ಪರಿಸ್ಥಿತಿಯಲ್ಲಿ ಪ್ರಾಯೋಗಿಕ ಜಗತ್ತಿನ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಸಮಾಜ ಮುಖಿಯಾಗುವ ಅಗತ್ಯವಿದೆ ಎಂದರು.

ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಪ್ರತಿಯೊಂದು ಜ್ಞಾನವು ವೃತಿಜೀವನಕ್ಕೆ ಉಪಕಾರಿಯಾಗಲಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಉಷಾ ಎಂ, ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಜಿ ಶ್ರೀಧರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ದೀಕ್ಷಾ, ದೇವಿಕಾ ಮತ್ತು ಸನ್ಮಯ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹಾಡಿದರು. ಸಮಾರಂಭದಲ್ಲಿ ಕಾಲೇಜಿನ ಬೋಧಕ- ಬೊಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ದೇವಿಚರಣ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ವೃಂದ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಮಾನವಿ ಸ್ವಾಗತಿಸಿ ಧರಿತ್ರಿ ವಂದಿಸಿದರು.

You may also like

Leave a Comment