Home » ಪುತ್ತೂರು : ಕಾರ್ತಿಕ್ ಮೇರ್ಲ ಕೊಲೆಯ ಪ್ರಮುಖ ಆರೋಪಿ ಚರಣ್ ನನ್ನು ಹಾಡಹಗಲೇ ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳು !!!

ಪುತ್ತೂರು : ಕಾರ್ತಿಕ್ ಮೇರ್ಲ ಕೊಲೆಯ ಪ್ರಮುಖ ಆರೋಪಿ ಚರಣ್ ನನ್ನು ಹಾಡಹಗಲೇ ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳು !!!

0 comments

ಪುತ್ತೂರು : ಹಿಂದೂ ಜಾಗರಣೆ ವೇದಿಕೆಯ ಕಾರ್ಯದರ್ಶಿಯಾಗಿದ್ದ, ಕಾರ್ತಿಕ್ ಮೇರ್ಲ ಎಂಬವರ ಹತ್ಯೆಯ ಆರೋಪಿಯೋರ್ವನನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಘಟನೆಯೊಂದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಅರ್ಯಾಪು ನಿವಾಸಿ ಚರಣ್ (28) ಮೃತ ಯುವಕ. ಇವರು ಕಾರ್ತಿಕ್ ಮೇರ್ಲ ಹತ್ಯೆಯ ಮೂರು ಆರೋಪಿಗಳ ಪೈಕಿ ಓರ್ವ.

ಚರಣ್ ಅವರ ಪತ್ನಿ ಪೆರ್ಲಂಪಾಡಿಯವರಾಗಿದ್ದ. ಅಲ್ಲಿಯೇ ಚರಣ್ ಮೆಡಿಕಲ್ ಶಾಪ್ ತೆರೆಯಲು ಸಿದ್ಧತೆ ನಡೆಸಿದ್ದರು. ಪೆರ್ಲಂಪಾಡಿಯ ಮೇಲಿನ ಪೇಟೆಯ ಕಾಂಪ್ಲೆಕ್ಸ್ ಒಂದರಲ್ಲಿ ಮೆಡಿಕಲ್ ಶಾಪ್ ಗೆ ಅಂಗಡಿ ಸಜ್ಜುಗೊಳಿಸಿದ್ದು ನಾಳೆ ಅದರ ಶುಭಾರಂಭ ನಡೆಯಲಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಂಗಡಿಗೆ ಬೇಕಾದ ಸಾಮಾನು ಸರಂಜಾಮು ಜೋಡಿಸುವ ಕಾರ್ಯದಲ್ಲಿ ಚರಣ್ ತೊಡಗಿಸಿಕೊಂಡಿದ್ದರು. ಇಂದು ಸಂಜೆಯ ವೇಳೆ ಎರಡು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲ್ವಾರ್ ನಿಂದ ಚರಣ್ ಗೆ ಕಡಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ ಅವರು ಬಳಿಕ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

2019ರ ಸೆ.4 ರಂದು ರಾತ್ರಿ 10 ಗಂಟೆ ಸುಮಾರಿಗೆ ಗಣೇಶೋತ್ಸವದ ಪೆಂಡಾಲ್ ನಲ್ಲಿ ಕಾರ್ತಿಕ್ ಮೇರ್ಲ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಹೋದರರಾದ ಕಿರಣ್ ಮತ್ತು ಹಾಗೂ ಚರಣ್ ಹಾಗೂ ಮಂಗಳೂರು ನಿವಾಸಿ ಪ್ರಿತೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಚರಣ್ ಹಾಗೂ ಕಿರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ
ಹೊಂದಿದ್ದರು. ಇದೀಗ ಚರಣ್ ಹತ್ಯೆ ನಡೆದಿದೆ. ಅದೇ ಹಳೆಯ ಹತ್ಯಾ ದ್ವೇಷದ ಹಿನ್ನೆಲೆಯಲ್ಲಿ ಆಗಿರುವ ಸಾಧ್ಯತೆ ಎನ್ನುವುದು ಬಲವಾದ ಗುಮಾನಿ.

ಪುತ್ತೂರು : ಚರಣ್ ರಾಜ್ ಕೊಲೆ ಪ್ರಕರಣ : ಕಿಶೋರ್ ಕಲ್ಲಡ್ಕ ತಂಡದ ಕೃತ್ಯ?

You may also like

Leave a Comment