Home » ಸಿದ್ದರಾಮಯ್ಯ ,ಕುಮಾರಸ್ವಾಮಿ ಸಾಲಿಗೆ ಸೇರ್ಪಡೆಯಾದ ರಮಾನಾಥ ರೈ

ಸಿದ್ದರಾಮಯ್ಯ ,ಕುಮಾರಸ್ವಾಮಿ ಸಾಲಿಗೆ ಸೇರ್ಪಡೆಯಾದ ರಮಾನಾಥ ರೈ

by Praveen Chennavara
0 comments

Ramanath rai : ಬಂಟ್ವಾಳ: ಈ ಬಾರಿಯ ವಿಧಾನಸಭಾ ಚುನಾವಣೆಯೇ ನಮ್ಮ ರಾಜಕೀಯ ಸ್ಪರ್ಧೆಯ ಕೊನೆಯ ಚುನಾವಣೆ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.ಇದೀಗ ಆ ಸಾಲಿಗೆ ದಕ್ಷಿಣ ಕನ್ನಡದ ಬಂಟ್ವಾಳ (Bantwal election) ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರೂ ಆಗಿರುವ ಬಿ.ರಮಾನಾಥ ರೈ (Ramanath rai) ಸೇರಿದ್ದಾರೆ.

ಈ ಬಾರಿಯ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ರಮಾನಾಥ ರೈ ಘೋಷಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ರಮಾನಾಥ ರೈ ಅವರು,
ಕಾಂಗ್ರೆಸ್‌ ನೀಡಿದ ಎಲ್ಲಾ ಅವಕಾಶಗಳನ್ನು ಬಳಸಿ ಜನಸೇವೆ ಮಾಡಿದ್ದೇನೆ. ಈವರೆಗೆ 8 ಬಾರಿ ಬಂಟ್ವಾಳದಲ್ಲಿ ಸ್ಪರ್ಧೆ ಮಾಡಲು ಅವಕಾಶ ಪಡೆದು ಶಾಸಕನಾಗಿ, ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನದು 9ನೇ ಚುನಾವಣೆಯಾಗಿದ್ದು, ಕೊನೆಯ ಬಾರಿಗೆ ಸ್ಪರ್ಧೆ ಮಾಡುತ್ತೇನೆ. ತಾನು ಹೇಳಿದ್ದನ್ನು ಮಾಡಿದ್ದು, ಮಾಡಿದ್ದನ್ನೇ ಹೇಳಿದ್ದೇನೆ.

ನಾನು ಚುನಾವಣೆಗೆ ನಿಲ್ಲುವುದಕ್ಕಾಗಿ ಎಲ್ಲಿಂದಲೋ ಬಂಟ್ವಾಳಕ್ಕೆ ಬಾರದೆ ಇಲ್ಲಿಂದಲೇ ರಾಜಕೀಯವನ್ನು ಆರಂಭಿಸಿದ್ದೇನೆ. ಯಾರೋ ಮಾಡಿರುವುದನ್ನು ತನ್ನದೆಂದು ಹೇಳುವ ಜಾಯಮಾನ ನನ್ನದಲ್ಲ. ಜನರು ಅವಕಾಶ ನೀಡಿದರೆ ಅದ್ಭುತವಾಗಿ ಕೆಲಸ ಮಾಡಿ ತೋರಿಸಲಿದ್ದೇನೆ ಎಂದಿದ್ದಾರೆ.

ಅವರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಾ. 10ರಿಂದ ಕ್ಷೇತ್ರಾದಾದ್ಯಂತ ಕಾಂಗ್ರೆಸ್‌ ರಥ ಯಾತ್ರೆಯನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

You may also like

Leave a Comment